ಕೊಪ್ಪಳ ಗವಿ ಮಠದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತಿದೆ. ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಜಾತ್ರೆ ಸೇರಿದಂತೆ ಇಡೀ ಮಠದಿಂದ ತ್ರಿವಿಧ ದಾಸೋಹಗಳು ನಡೆಯುತ್ತಿವೆ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ, ಜಾತ್ರೆಯ ಸಂದರ್ಭದಲ್ಲಿ ಇಡೀ ವರ್ಷ ಸಮಾಜಿಕ ಸಂದೇಶ ನೀಡುವಂಥ ಸಂಕಲ್ಪ ಮಾಡಲಾಗುತ್ತಿದೆ.
gavi mutt
ಹೈಲೈಟ್ಸ್:
ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಕೊಪ್ಪಳ ಗವಿಮಠದಲ್ಲಿ ಜಾತ್ರೆಯ ಸಂದರ್ಭದಲ್ಲಿ ಇಡೀ ವರ್ಷ ಸಮಾಜಿಕ ಸಂದೇಶ ನೀಡುವಂಥ ಸಂಕಲ್ಪ ಮಾಡಲಾಗುತ್ತಿದೆ.
ಅಂಗಾಂಗ ದಾನದ ಜಾಗೃತಿ ಜಾಥಾ, ಸತ್ತ ಮೇಲೂ ಬದುಕುವಯೋಗ, ಸಾಯುವವನಿಗೆ ಅಂಗಾಂಗ ಯೋಗ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ 67 ಶಾಲಾ ಕಾಲೇಜು ಸೇರಿ ಸಾವಿರಾರು ಜನರು ಭಾಗಿಯಾಗಿದ್ದರು. ಜಾಥಕ್ಕೆ ಜಿಲ್ಲಾಡಳಿತವು ಸಹ ಸಾಥ್ ನೀಡಿದ್ದರು.
ಕೊಪ್ಪಳ: ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಕೊಪ್ಪಳ ಗವಿಮಠದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತಿದೆ. ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಜಾತ್ರೆ ಸೇರಿದಂತೆ ಇಡೀ ಮಠದಿಂದ ತ್ರಿವಿಧ ದಾಸೋಹಗಳು ನಡೆಯುತ್ತಿವೆ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ, ಜಾತ್ರೆಯ ಸಂದರ್ಭದಲ್ಲಿ ಇಡೀ ವರ್ಷ ಸಮಾಜಿಕ ಸಂದೇಶ ನೀಡುವಂಥ ಸಂಕಲ್ಪ ಮಾಡಲಾಗುತ್ತಿದೆ.
ಈ ಸಂಕಲ್ಪಗಳು ಸಕಾರಗೊಂಡು ಜನರಲ್ಲಿ ಮಠದ ಬಗ್ಗೆ ಇದ್ದ ಭಾವನೆಯನ್ನು ಇನ್ನಷ್ಟು ಪೂಜನೀಯಗೊಳಿಸಲಾಗಿದೆ. ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ 2023 ರ ಸಾಮಾಜಿಕ ಧ್ಯೇಯ ವಿಷಯವಾಗಿ ಪರೋಪಕಾರಾರ್ಥಮ್ ಇದಮ್ ಶರೀರಂ—ಅಂಗಾಂಗ ದಾನದ ಜಾಗೃತಿ ಜಾಥಾ, ಸತ್ತ ಮೇಲೂ ಬದುಕುವಯೋಗ, ಸಾಯುವವನಿಗೆ ಅಂಗಾಂಗ ಯೋಗ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ