Breaking News

ಮನೆ ಮನೆಗೆ ಬುದ್ಧ, ಬಸವ-ಅಂಬೇಡ್ಕರ್: ಸತೀಶ್ ಜಾರಕಿಹೊಳಿಯಿಂದ ವಿನೂತನ ಕಾರ್ಯಕ್ರಮ

Spread the love

ಬೆಳಗಾವಿ: ಹರ್ ಘರ್ ತಿರಂಗಾ, ಮನೆಮನೆಗೂ ಕನ್ನಡ ಧ್ವಜ ಅಭಿಯಾನ ಆಯ್ತು. ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಕಾರ್ಯಕ್ರಮ ಆಯೋಜಿಸಿದ್ದಾರೆ.

 

ಇದೇ ನ. 6ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಸಮಾವೇಶ ಮಾಡಿ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

 

ಇನ್ನು ಈ ಬಗ್ಗೆ ಇಂದು(ನ.02) ನಿಪ್ಪಾಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನ. 6ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಸಮಾವೇಶ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತೆ. ಮಹಾನ್ ನಾಯಕರ ಇತಿಹಾಸವನ್ನ ಜನರಿಗೆ ತಿಳಿ ಹೇಳುವ ಕೆಲಸ ಆಗಲಿದೆ. ಮಾವನ ಬಂಧುತ್ವ ವೇದಿಕೆಯಿಂದ ಈ ಸಮಾವೇಶ ನಡೆಯಲಿದೆ ಎಂದರು.

ಇದು ರಾಜಕೀಯೇತರ ಕಾರ್ಯಕ್ರಮವಾಗಿದ್ದು ಚುನಾವಣೆ ಮುಗಿದ ಬಳಿಕವೂ ನಡೆಯಲಿದೆ. ಈ ಸಮಾವೇಶದಿಂದ ಹಲವಾರು ನಾಯಕರಿಗೆ ಅನುಕೂಲ ಆಗಲಿದೆ. ಆದ್ರೇ, ಅವರು ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಸುಷ್ಮಾ ಅಂಧಾರಿಯವರು ಪ್ರಮುಖ ಭಾಷಣಕಾರರಾಗಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

 

ಈ ಸಮಾವೇಶದಿಂದ ಸತೀಶ್ ಬಿಜೆಪಿ ಟಾರ್ಗೆಟ್ ಆಗ್ತಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ. ಟಾರ್ಗೆಟ್ ನಲ್ಲೇ ಜೀವನ ಮಾಡೊದು ನನಗೆ ಖುಷಿ. ಗಾಳಿ ನೀರು ಬೆಂಕಿಯ ಎದರು ಈಜುತ್ತೇನೆ. ಚಾಲೆಂಜ್ ಸ್ವೀಕಾರ ಮಾಡೊದು ನನಗೆ ಖುಷಿಯ ವಿಚಾರ. ರಾಷ್ಟ್ರ ನಾಯಕರು ಬಂದು ನಮ್ಮ‌ ಜತೆಗೆ ಕುಸ್ತಿ ಹಿಡಿದರೆ ನನಗೂ ಖುಷಿ ಎಂದು ತಿಳಿಸಿದರು.


Spread the love

About Laxminews 24x7

Check Also

ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ನಿವೃತ್ತ ಶಿಕ್ಷಕನ ಹತ್ಯೆ

Spread the loveಬೆಂಗಳೂರು, (ಡಿಸೆಂಬರ್ 03): ಸುದೀರ್ಘ ಸೇವೆಯ ಬಳಿಕ ನಿವೃತ್ತಿಯಾಗಿದ್ದ ಶಿಕ್ಷಕರೊಬ್ಬರು ಕನಸಿನ ಮನೆ ಕಟ್ಟಲು ಹಣ ಡ್ರಾ ಮಾಡಿಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ