Breaking News

ಉಳ್ಳವರ ಮನೆಯಲ್ಲಿ ಹಣ ದೋಚಿ, ಬಡವರಿಗೆ ದಾನ ಮಾಡ್ತಿದ್ದ ಕಳ್ಳ ಅರೆಸ್ಟ್

Spread the love

ಬೆಂಗಳೂರು: ಉಳ್ಳವರ ಮನೆಗೆ ಕನ್ನ ಹಾಕೋದು. ಕದ್ದ ಮಾಲಲ್ಲಿ ಮಂದಿರ, ಚರ್ಚ್‍ಗಳ ಹುಂಡಿಗೆ ಹಣ ಹಾಕೋದು. ಭಿಕ್ಷುಕರಿಗೆ ದಾನ ಧರ್ಮ ಮಾಡ್ತಿದ್ದ ಮಾಡರ್ನ್ ಕಳ್ಳನನ್ನು (Thief) ಬೆಂಗಳೂರಿನ (Bengaluru) ಮಡಿವಾಳ ಪೊಲೀಸರು (Police) ಬಂಧಿಸಿದ್ದಾರೆ.

ಜಾನ್ ಮೆಲ್ವಿನ್ ಅಲಿಯಾಸ್ ಮಾಡರ್ನ ರಾಬಿನ್‍ವುಡ್ ಬಂಧಿತ ವ್ಯಕ್ತಿ. ರಾಬಿನ್‍ವುಡ್ ಶೈಲಿಯಲ್ಲೇ ದೋಚಿದ ವಸ್ತುಗಳನ್ನು ಬಡ ಬಗ್ಗರಿಗೆ ಈತನೂ ದಾನ ಮಾಡುತ್ತಿದ್ದ. ಮಡಿವಾಳ ಲಿಮಿಟ್ಸ್‌ನಲ್ಲಿ ಕಾಂಟ್ರ್ಯಾಕ್ಟರ್ ಒಬ್ಬರ ಮನೆಗೆ ಕನ್ನ ಹಾಕಿ 8 ಲಕ್ಷ ನಗದು 2 ಲಕ್ಷದ ಚಿನ್ನಾಭರಣ ದೋಚಿದ್ದ.

1990ರಿಂದಲೇ ಕಳ್ಳತನ ವೃತ್ತಿ ಮಾಡ್ಕೊಂಡಿದ್ದ ಈತನ ಮೇಲೆ 50ಕ್ಕೂ ಹೆಚ್ಚು ಕೇಸ್‍ಗಳಿವೆ. ಕದ್ದ ಹಣದಲ್ಲಿ ಸ್ವಲ್ಪ ಹಣವನ್ನು ದೇವಸ್ಥಾನ ಮತ್ತು ಚರ್ಚ್‍ಗಳ ಹುಂಡಿಗೆ ಹಾಕುತ್ತಿದ್ದ. ಭಿಕ್ಷುಕರಿಗೆ ನೀಡುತ್ತಿದ್ದ. ಸ್ವಂತ ನೆಲೆ ಇಲ್ಲದೆ ಫೋನ್ ಬಳಸದೆ, ಒಬ್ಬಂಟಿಯಾಗೇ ಮನೆಗಳಿಗೆ ಕನ್ನ ಹಾಕುವ ಈ ರಾಬಿನ್‍ವುಡ್‌ನನ್ನು  ಇದೀಗ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮತ್ತೆ ರಾಬಿನ್‍ವುಡ್ ವಿರುದ್ಧ ಮೂರು ಕೇಸ್‌ಗಳು ದಾಖಲಾಗಿವೆ.


Spread the love

About Laxminews 24x7

Check Also

ಪ್ರಧಾನಿ ಮೋದಿ ಒಂದು ದಿನ ತಮ್ಮ ಕೃತ್ಯಗಳಿಗೆ ಪಶ್ಚಾತ್ತಾಪ ಪಡುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Spread the loveಕಲಬುರಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ