ಬೆಳಗಾವಿಯ ಪೊಲೀಸ್ ಮ್ಯೂಸಿಯಂನಲ್ಲಿ ಹಳೆ ಪಿಸ್ತೂಲ್ ಸೇರಿ ಇನ್ನಿತರ ವಸ್ತುಗಳನ್ನು ನೋಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಶ್ಚರ್ಯ ವ್ಯಕ್ತಪಡಿಸಿದರು. ಇದನ್ನು ದೆಹಲಿ ರಾಷ್ಟ್ರೀಯ ಮಟ್ಟದ ಪೊಲೀಸ್ ಮ್ಯೂಸಿಯಂನ್ನಾಗಿ ಮಾಡೋಣ ಎಂದು ಭರವಸೆ ನೀಡಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ಹೆಡ್ ಕ್ವಾಟರ್ಸ ಆವರಣಕ್ಕೆ ಆಗಮಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಜಿಲ್ಲಾ ಪೊಲೀಸರು ಗೌರವ ವಂದನೆ ಸಲ್ಲಿಸಿದರು.
ಗೌರವ ವಂದನೆ ಸ್ವೀಕರಿಸಿದ ಬಳಿಕ ಪೊಲೀಸ್ ಸಮುದಾಯ ಭವನದಲ್ಲಿರುವ ಪೊಲೀಸ್ ಮ್ಯೂಸಿಯಂನ್ನು ಗೃಹ ಸಚಿವರ ಆರಗ ಜ್ಞಾನೇಂದ್ರ ವೀಕ್ಷಣೆ ಮಾಡಿದರು. ಈ ವೇಳೆ ಹಳೆ ಬಂದೂಕು, ಶಸ್ತ್ರಾಸ್ತ್ರಗಳು, ಹೆಲ್ಮೆಟ್ ಸೇರಿ ಇನ್ನಿತರ ಪೊಲೀಸ್ ಸಾಮಗ್ರಿಗಳನ್ನು ವೀಕ್ಷಿಸಿದರು. ಇದೇ ವೇಳೆ ಹಳೆಯ ಬಂದೂಕನ್ನು ಹಿಡಿದು ಗೃಹ ಸಚಿವರು ಪರೀಕ್ಷಿಸಿದರು.
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಗೃಹ ಸಚಿವರು ನಮ್ಮ ಬೆಳಗಾವಿಯ ಪೊಲೀಸರ ವಿಶೇಷ ಪ್ರಯತ್ನದಿಂದ ಒಂದು ಪೊಲೀಸ್ ಮ್ಯೂಸಿಯಂನ್ನು ನಿರ್ಮಾಣ ಮಾಡಲಾಗಿದೆ. ಬಹಳ ಚನ್ನಾಗಿ ಮಾಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
Laxmi News 24×7