Breaking News

ದಾವಣಗೆರೆಯ ಎಸ್​.ಎಸ್​.ಆಸ್ಪತ್ರೆಗೆ ನವೀನ್​ ದೇಹದಾನ.

Spread the love

ಹಾವೇರಿ: ಉಕ್ರೇನ್​​ನ ದಾಳಿಯಲ್ಲಿ ಸಾವನ್ನಪ್ಪಿದ ನವೀನ್​ ಮೃತದೇಹವನ್ನು ತವರಿಗೆ ತರಲಾಗಿದ್ದು, ನವೀನ್​​ ದೇಹದಾನಕ್ಕೆ ಪ್ರಕ್ರಿಯೆ ಸ್ಟಾರ್ಟ್​ ಆಗಿದೆ. ನವೀನ ದೇಹದಾನ ಮಾಡುವ ಮೂಲಕ ಆತನ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಅಧಿಕಾರಿಗಳು ದೇಹದಾನ ವಿಧೇಯಕ ಪತ್ರ ತಂದಿದ್ದು, ಪ್ರಕ್ರಿಯೆ ಆರಂಭಿಸಿದ್ದಾರೆ. ನವೀನ್​ ದೇಹವನ್ನು ದಾವಣಗೆರೆಯ ಎಸ್​.ಎಸ್​.ಆಸ್ಪತ್ರೆಗೆ ನೀಡಲಾಗುತ್ತದೆ.

ಇಂದು ಸಂಜೆ ಮೃತದೇಹ ಆಸ್ಪತ್ರೆಗೆ ಹಸ್ತಾಂತರವಾಗಲಿದೆ. ನವೀನ್​​​ ಉಕ್ರೇನ್​​​​ನಲ್ಲಿ ಮೆಡಿಕಲ್​ ವ್ಯಾಸಂಗ ಮಾಡುತ್ತಿದ್ದ. ವೈದ್ಯಲೋಕಕ್ಕೆ ನಾನು ಏನಾದ್ರು ಮಾಡಬೇಕು ಎನ್ನುತ್ತಿದ್ದ ,ಡಾಕ್ಟರ್​​ ಆಗಿ ನನ್ನ ಮಗ ಆಸೆ ಪೂರೈಸಿಕೊಳ್ಳಲಿಲ್ಲ. ಸತ್ತ ಮೇಲಾದ್ರೂ ಮೆಡಿಕಲ್​ ವಿದ್ಯಾರ್ಥಿಗಳಿಗೆ ನೆರವಾಗಲಿ ಎಂದು ನವೀನ್ ತಂದೆ ಶೇಖರ್ ಗ್ಯಾನಗೌಡರ್ ತಿಳಿಸಿದ್ದಾರೆ.

ಅಂತಿಮ ದರ್ಶನದ ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ದೇಹದಾನ ಮಾಡಲಾಗುವುದು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ