Breaking News

ಕೋವಿಡ್ ಟೆಸ್ಟ್ ವರದಿ ಪಡೆಯಲು ಹೋಗಿದ್ದ ನರ್ಸ್ ಮೇಲೆ ಅತ್ಯಾಚಾರ..!

Spread the love

ತಿರುವನಂತಪುರಂ : ಕೋವಿಡ್‌ ಸೋಂಕಿತೆ ಮೇಲೆ ಆಯಂಬುಲೆನ್ಸ್‌ ಚಾಲಕನೋರ್ವ ಅತ್ಯಾಚಾರ ಎಸಗಿದ ಘಟನೆ ಬೆನ್ನಲ್ಲೇ, ಕೇರಳದಲ್ಲಿ ಮತ್ತೊಂದು ರೇಪ್‌ ಪ್ರಕರಣ ವರದಿಯಾಗಿದೆ. ಸಂತ್ರಸ್ತೆ ಮಲಪ್ಪುರಂನಲ್ಲಿ ಹೋಮ್‌ನರ್ಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ರಜೆ ಮೇಲೆ ಮನೆಗೆ ಮರಳಿದ್ದರು.

ಈ ವೇಳೆ ಅವರಿಗೆ ಕೊರೋನಾ ಟೆಸ್ಟ್‌ ಮಾಡಿಸಿ, ಹೋಂ ಕ್ವಾರಂಟೈನ್‌ಗೆ ಒಳಗಾಗುವಂತೆ ಆರೋಗ್ಯ ಅಧಿಕಾರಿ ಸೂಚಿಸಿದ್ದರು. ಈ ಪ್ರಕಾರ ಆಯಂಟಿಜೆನ್‌ ಟೆಸ್ಟ್‌ಗೆ ಒಳಗಾಗಿದ್ದರು.

ವರದಿಯಲ್ಲಿ ನೆಗೆಟಿವ್‌ ರಿಪೋರ್ಟ್‌ ಬಂದಿತ್ತು. ವರದಿಯ ದಾಖಲೆಯನ್ನು ತೆಗೆದುಕೊಂಡು ಹೋಗಲು ಬಾರಂತೂರಿನ ಫ್ಲಾಟ್‌ಗೆ ದಾದಿಯನ್ನು ಆಹ್ವಾನಿಸಿ ಆರೋಗ್ಯಾಧಿಕಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಫ್ಲ್ಯಾಟ್‌ಗೆ ಹೋಗಿದ್ದ ನನ್ನನ್ನು ಕಟ್ಟಿಹಾಕಿ ಲೈಂಗಿಕವಾಗಿ ಆಕ್ರಮಣ ಮಾಡಿ, ಮರುದಿನ ಬಿಟ್ಟು ಕಳುಹಿಸಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದು, ಆರೋಗ್ಯಾಧಿಕಾರಿ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ