Breaking News

ಟೈಸನ್‌’ ಶ್ವಾನದ ಜನ್ಮದಿನ: 150 ಮಂದಿಗೆ ಬಿರಿಯಾನಿ ಊಟ, 13 ಸಾವಿರ ಬೆಲೆ ಬಾಳುವ ಹಾಸಿಗೆ ಉಡುಗೊರೆ

Spread the love

ಶಿವಮೊಗ್ಗ : ತಾವು ಸಾಕಿರುವ ಶ್ವಾನದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ಶ್ವಾನಪ್ರಿಯರೊಬ್ಬರು ಶ್ವಾನಕ್ಕೆ ಬೆಲೆಬಾಳುವ ಉಡುಗೊರೆ ನೀಡಿದ್ದಾರೆ.

 

ಇಲ್ಲಿನ ರಾಗಿಗುಡ್ಡದ ನಿವಾಸಿ ಮಹಮದ್ ಅಯಾಜ್ ಅವರು ಸೈಬೀರಿಯನ್ ಹಸ್ಕಿ ತಳಿಯ ಶ್ವಾನವೊಂದನ್ನು ಸಾಕಿದ್ದಾರೆ. ಅದಕ್ಕೆ ‘ಟೈಸನ್’ ಎಂದು ಹೆಸರಿಟ್ಟಿದ್ದಾರೆ. ‘ಟೈಸನ್‌’ಗೆ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

150 ಮಂದಿಗೆ ಬಿರಿಯಾನಿ ಊಟ: ಟೈಸನ್ ಮೊದಲ ವರ್ಷದ ಹುಟ್ಟುಹಬ್ಬಕ್ಕಾಗಿ ಮಹಮದ್ ಅಯಾಜ್ ಅವರು ಮನೆ ಬಳಿ ಪೆಂಡಾಲ್ ಹಾಕಿಸಿ, ನಾಯಿಯಿಂದ ಕೇಕ್ ಕಟ್ ಮಾಡಿಸಿದರು. ಸ್ನೇಹಿತರು, ಸ್ಥಳೀಯರಿಗೆ ಚಿಕನ್ ಬಿರಿಯಾನಿ ಊಟ ಹಾಕಿಸಿದ್ದಾರೆ. 150 ಮಂದಿ ಶ್ವಾನದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು.

ಟೈಸನ್‌ಗೆ ಗಿಫ್ಟ್: ಟೈಸನ್‌ಗೆ ₹ 13 ಸಾವಿರ ಬೆಲೆ ಬಾಳುವ ಹಾಸಿಗೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ನಾಯಿ ಸಾಕಲು ಮನೆಯವರು ವಿರೋಧಿಸಿದ ಕಾರಣ ಟೈಸನ್‌ಗಾಗಿ ಮಹಮದ್ ಅಯಾಜ್ ಮನೆಯವರಿಂದ ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ.


Spread the love

About Laxminews 24x7

Check Also

ಶಿವಮೊಗ್ಗದಲ್ಲಿ ಹಾವು ಕಡಿದು 2 ವರ್ಷದ ಮಗು ಸಾವು

Spread the loveಶಿವಮೊಗ್ಗ: ಹಾವು ಕಡಿದು  2 ವರ್ಷದ ಮಗು  ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಸಾಗರ ಪಟ್ಟಣದ ಎಸ್.ಎಸ್ ನಗರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ