Breaking News

ಚಲಿಸುತ್ತಿದ್ದ ಬಸ್‌ ಡ್ರೈವರ್‌ಗೆ ಫಿಟ್ಸ್‌… ಈ ಮಹಿಳೆ ತೋರಿದ ಧೈರ್ಯಕ್ಕೆ ಎಲ್ಲ ಪ್ರಯಾಣಿಕರು ಸೇಫ್‌..!

Spread the love

ಪುಣೆ (ಮಹಾರಾಷ್ಟ್ರ): ಚಲಿಸುತ್ತಿದ್ದ ಮಿನಿ ಬಸ್‌ ಚಾಲಕನಿಗೆ ಫಿಟ್ಸ್‌ ಬಂದ ಹಿನ್ನೆಲೆಯಲ್ಲಿ ಕೂಡಲೇ ಆತನ ನೆರವಿಗೆ ಬಂದ ಮಹಿಳೆಯೊಬ್ಬರು ಬಸ್‌ ಅನ್ನು ಚಾಲನೆ ಮಾಡಿ ಮಕ್ಕಳು ಸಹಿತ ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಬಸ್ಸಿನಲ್ಲಿದ್ದ ಮಕ್ಕಳು ಹಾಗೂ ಮಹಿಳೆಯರು ಪುಣೆ ಸಮೀಪದ ಶಿರೂರ್‌ನಲ್ಲಿ ಇರುವ ಕೃಷಿ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿ ವಾಪಸ್‌ ಬರುತ್ತಿದ್ದಾಗ ಬಸ್‌ನ ಚಾಲಕನಿಗೆ ಮೂರ್ಛೆ ಬಂದು ಏಕಾಏಕಿ ಕೆಳಗಡೆ ಬಿದ್ದು ಹೋಗಿದ್ದಾರೆ. ಖಾಲಿ ಇದ್ದ ರಸ್ತೆಯಲ್ಲಿ ಬಸ್‌ ಅನ್ನು ನಿಲ್ಲಿಸಿ ಫಿಟ್ಸ್‌ ಬಂದಿರುವ ಬಗ್ಗೆ ಕೈ ಸನ್ನೆಯಲ್ಲೇ ತಿಳಿಸಿದ್ದಾನೆ.ಈ ವೇಳೆ ಬಸ್‌ನಲ್ಲಿದ್ದ ಮಕ್ಕಳು ಅಳಲು ಶುರು ಮಾಡಿದ್ದಾರೆ. ಮಹಿಳೆಯರು ಕೂಡ ಕ್ಷಣಕಾಲ ಆತಂಕಕ್ಕೆ ಒಳಗಾಗಿದ್ದರು.

ಅದೇ ಬಸ್ಸಿನಲ್ಲಿದ್ದ 42 ವರ್ಷದ ಯೋಗಿತಾ ಸತವ್‌ ಎಂಬ ಮಹಿಳೆ ಕೂಡಲೇ ಡ್ರೈವರ್‌ ಸೀಟಿಗೆ ಬಂದು ಬಸ್ಸನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಧೈರ್ಯದಿಂದಲೇ ಬಸ್‌ ಅನ್ನು ಚಾಲನೆ ಮಾಡುವ ಮೂಲಕ ನೇರವಾಗಿ ಆಸ್ಪತ್ರೆಗೆ ಬಂದಿದ್ದಾರೆ. ಬಳಿಕ ಎಲ್ಲ ಪ್ರಯಾಣಿಕರನ್ನು ತಮ್ಮ ತಮ್ಮ ಮನೆಗಳಿಗೆ ಸೇರಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ