ದುಬೈನಲ್ಲಿ ನಡೆಯುತ್ತಿರುವ ಟಿ20 ವರ್ಲ್ಡ್ಕಪ್ನಲ್ಲಿ ಟೀಂ ಇಂಡಿಯಾ ಹಾಗೂ ಪಾಕ್ ಟೀಂ ಮುಖಾಮುಖಿಯಾಗಿದ್ದು ಹೈವೋಲ್ಟೇಜ್ ಮ್ಯಾಚ್ ಚಾಲ್ತಿಯಲ್ಲಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಾಕ್ ಟೀಂ ಇಂಡಿಯಾವನ್ನ ಬ್ಯಾಟಿಂಗ್ಗೆ ಆಹ್ವಾನಿಸಿತು. ಆರಂಭಿಕ ಆಘಾತ ಅನುಭವಿಸಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು.
152 ರನ್ಗಳ ಗುರಿ ಬೆನ್ನು ಹತ್ತಿದ ಪಾಕ್ ಟೀಂ ಆರಂಭದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದೆ. ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಫೀಲ್ಡಿಗಿಳಿದ ಬಾಬರ್ ಮತ್ತು ರಿಜ್ವಾನ್ ಜೋಡಿ 7.5 ಓವರ್ಗಳಲ್ಲಿ 46 ಬಾಲ್ಗಳನ್ನು ಎದುರಿಸಿ 50 ರನ್ ಕಲೆಹಾಕಿದೆ.
Laxmi News 24×7