Breaking News

ಹಾನಗಲ್ ಉಪಚುನಾವಣೆ: ರೇಸ್​ನಲ್ಲಿ 11 ಮಂದಿ.. ಇಕ್ಕಟ್ಟಿನಲ್ಲಿ ಬಿಜೆಪಿ ಹೈಕಮಾಂಡ್..!

Spread the love

ಬೆಂಗಳೂರು: ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಟಿಕೆಟ್​ಗಾಗಿ ಅಭ್ಯರ್ಥಿಗಳ ಲಾಭಿ ಜೋರಾಗಿದೆ. ಈಗಾಗಲೇ ಹಾನಗಲ್​ನಲ್ಲಿ ಮೂರು ಪಕ್ಷಗಳ ಪೈಕಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡಿವೆ. ಸದ್ಯ ಉಳಿದ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯ ಸಲುವಾಗಿ ಕಸರತ್ತು ಶುರುವಾಗಿದೆ.

ಬಿಜೆಪಿ ಟಿಕೆಟ್​ ರೇಸ್​ನಲ್ಲಿ ಬರೊಬ್ಬರಿ 11 ಮಂದಿ
ದೆಹಲಿಯಲ್ಲಿ ಹೈಕಮಾಂಡ್​ನಿಂದ ಅಭ್ಯರ್ಥಿ ಆಯ್ಕೆ

ಸದ್ಯ ಬಿಜೆಪಿಯಲ್ಲಿ ಅಭ್ಯರ್ಥಿಯ ಆಯ್ಕೆ ದೊಡ್ಡ ತಲೆನೋವಾಗಿದ್ದು, ಬರೋಬ್ಬರಿ 11 ಮಂದಿ ಟಿಕೆಟ್ ​ರೇಸ್​ನಲ್ಲಿದ್ದಾರೆ. ಈಗಾಗಲೇ 11 ಆಕಾಂಕ್ಷಿಗಳ ಪಟ್ಟಿ ತಯಾರಾಗಿದ್ದು, ದೆಹಲಿಯಲ್ಲಿ ಹೈಕಮಾಂಡ್​ನಿಂದ ಫೈನಲ್​ ಸೀಲ್​ ಬೀಳಲಿದೆ.

ರೇಸ್​ನಲ್ಲಿ 11 ಮಂದಿ!
ಸದ್ಯ ಹಾನಗಲ್​ ಕ್ಚೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಬರೋಬ್ಬರಿ 11 ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿದೆ. ಈಗಾಗಲೇ ಹಾನಗಲ್ಲಿನಲ್ಲಿ ನಡೆದ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಆಕಾಂಕ್ಷಿಗಳ ಪಟ್ಟಿ ತಯಾರಾಗಿದೆ. ರಾಜ್ಯ ಬಿಜೆಪಿ ಕೋರ್ ಕಮಿಟಿಗೆ 11 ಆಕಾಂಕ್ಷಿಗಳನ್ನ ಒಳಗೊಂಡ ಪಟ್ಟಿ ರವಾನಿಸಲು ತೀರ್ಮಾನಿಸಲಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳನ್ನ ಫೈನಲ್​ ಮಾಡಲಾಗುತ್ತೆ. ಬಳಿಕ ದೆಹಲಿಯಲ್ಲಿ ಅಂತಿಮವಾಗಿ ಅಭ್ಯರ್ಥಿಯನ್ನ ಹೈಕಮಾಂಡ್​ ಆಯ್ಕೆ ಮಾಡಿ ಘೋಷಿಸಲಿದೆ.

ಹಾನಗಲ್ ಕ್ಷೇತ್ರದಲ್ಲೂ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲಾಗುತ್ತೆ ಅಂತಾ ಹೇಳಲಾಗ್ತಿದೆ. ಸಂಘ ಪರಿವಾರವು ಪಕ್ಷದಲ್ಲಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಅಂತಾ ತನ್ನ ಅಭಿಮತ ವ್ಯಕ್ತಪಡಿಸಿದೆ. ಹೀಗಾಗಿ ಬಿಜೆಪಿಯಿಂದ ಮೂರು ಅಭ್ಯರ್ಥಿಗಳ ಹೆಸರು ಕೇಳಿಬರುತ್ತಿದೆ.

ಬಿಜೆಪಿಯಲ್ಲಿ ಅಭ್ಯರ್ಥಿಯ ಆಯ್ಕೆ ಹೈಕಮಾಂಡ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಿಎಸ್​ವೈ ಹಾಗೂ ಬೊಮ್ಮಾಯಿ ಹೇಳಿದವ್ರಿಗೆ ಮಣೆ ಹಾಕ್ಬೇಕಾ ಅಥವಾ ಸಂಘ ಹೇಳಿದವರನ್ನ ನಿಲ್ಲಿಸಬೇಕಾ ಎಂಬ ಗೊಂದಲದಲ್ಲಿ ಸಿಲುಕಿದೆ. ಇದೆಲ್ಲದರ ಮಧ್ಯೆ ಹೈಕಮಾಂಡ್​ನ ಅಂತಿಮ ಮುದ್ರೆ ಯಾರಿಗೆ ಬೀಳಲಿದೆ ಅನ್ನೋದೆ ಸದ್ಯದ ಕುತೂಹಲ.

 


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ