ವಿಜಯಪುರ : ಚಿಂದಿ ಹಾಗೂ ಹಂದಿ ಗೊಬ್ಬರ ಸಂಗ್ರಹಿಸಿ ಜೀವನ ನಡರಸುತ್ತಿದ್ದ 23 ವರ್ಷದ ಗೃಹಿಣಿ ಮೇಲೆ ಮೂವರು ಕಾಮಾಂಧರು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ವರದಿಯಾಗಿದೆ.
ಮುದ್ದೇಬಿಹಾಳ ಪಟ್ಟಣದಲ್ಲಿ ಚಿಂದಿ, ಹಂದಿ ಗೊಬ್ಬರ ಆಯ್ದು ಜೀವನನಡೆಸುತ್ತಿರುವ ವಿವಾಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರನ್ನು ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಅತ್ಯಾಚಾರಕ್ಕೆ ಯತ್ನಿಸಿದವರನ್ನು ಅಕ್ಬರ್ ಮಕಾನದಾರ, ಸಲೀಮ ನದಾಫ, ಸೋಯೆಲ್ ಹಡಗಲಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಭಾನುವಾರ ನಸುಕಿನಲ್ಲಿ ಸೂರ್ಯೋದಯಕ್ಕೆ ಮುನ್ನ ಕತ್ತಲೆ ಇರುವಾಗಲೇ ಸದರಿ ಮಹಿಳೆ ಚಿಂದಿ ಆಯುವ ಕೆಲಸಕ್ಕೆ ಮುಂದಾಗಿದ್ದಳು.
ಈ ಹಂತದಲ್ಲಿ ಮಹಿಳೆಯನ್ನು ಹಿಂಬಾಲಿಸಿ ಬಂದ ಆರೋಪಿಗಳು, ಆಕೆಯ ಕೈ ಹಿಡಿದು ಎಳೆದಾಡಿ, ಮಾನಭಂಗಕ್ಕೆ ಯತ್ನಿಸಿದ್ದಾರೆ. ಮಹಿಳೆ ಆಕ್ಷೇಪಿಸಿದ್ದರಿಂದ ಆರೋಪಿಗಳು ಪರಾರಿಯಾಗಿದ್ದಾರೆ.
ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಮುದ್ದೇಬಿಹಾಳ ಠಾಣೆ ಪೊಲೀಸರು, ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.
Laxmi News 24×7