ಬೆಂಗಳೂರು: ಕೆಲವು ದಿನಗಳ ಹಿಂದೆ ಸೆಕ್ಸ್ ಸಿಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೊದಲೇ, ರಮೇಶ್ ಅವರ ಸಹೋದರ ಮತ್ತು ಕೆಪಿಸಿಸಿ ಕಾರ್ಯನಿರತ ಅಧ್ಯಕ್ಷ ಸತೀಶ್ ಜಾರಕಿಹೋಳಿ ತಮ್ಮ ಹೆಲಿಕಾಪ್ಟರ್ನಲ್ಲಿ ಗೋಕಾಕ್ನಿಂದ ಬಾಗಲಕೋಟೆ ಬಳಿಯ ನಿಡಗುಂದಿ ಗ್ರಾಮಕ್ಕೆ ತೆರಳಿದ್ದರು. ಅಲ್ಲಿ ಸಿಡಿಯಲ್ಲಿದ್ದ ಮಹಿಳೆಯ ಕುಟುಂಬ ಎಂದು ನಂಬಲಾದ ಕುಟುಂಬ ಒಂದು ವಾಸವಿದ್ದು ಅವರನ್ನು ಭೇಟಿಯಾಗಿದ್ದರು. ಅಲ್ಲಿಂದ ‘ಸತೀಶ್ ಮಾರ್ಚ್ 5 ರಂದು ತನ್ನ ಖಾಸಗಿ ಚಾಪರ್ನಲ್ಲಿ ಕೂಡಲಸಂಗಮಕ್ಕೆ ಬಂದರು.
ಅವರು ಮೊದಲು ಹುನಗುಂದ ಹಾಗೂ ಖುಷ್ಟಗಿ ಗ್ರಾಮಗಳ ಬಳಿ ತಮ್ಮ ಕುಟುಂಬ ಸದಸ್ಯರ ಒಡೆತನದ ಕ್ವಾರಿಗೆ ಭೇಟಿ ನೀಡಿದರು, ಮತ್ತು ನಂತರ ನಿಡಗುಂದಿಯಲ್ಲಿ ವಾಸವಾಗಿರುವ ಸಿಡಿಯಲ್ಲಿ ಕಾಣಿಸಿಕೊಂಡಿದ್ದಾರೆ0ದು ಹೇಳಲಾದ ಮಹಿಳೆಯ ಸಂಬಂಧಿಕರು ಮತ್ತು ಕುಟುಂಬವನ್ನು ಭೇಟಿ ಮಾಡಿದರು.” : ಸೆಕ್ಸ್ ಸಿಡಿ ಹಗರಣದಲ್ಲಿ ಭಾಗಿಯಾಗಿರುವ ಜನರನ್ನು ಪತ್ತೆ ಹಚ್ಚಲು ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ನಡೆಸುತ್ತಿರುವ ಪೂರ್ಣ ಪ್ರಮಾಣದ ತನಿಖೆ ಜತೆಗೇ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಕುಟುಂಬವು ಈ ಪ್ರಕರಣದ ಬಗ್ಗೆ ತನ್ನದೇ ಆದ ತನಿಖೆಯನ್ನು ಪ್ರಾರಂಭಿಸಿದೆ ಎನ್ನಲಾಗುತ್ತಿದೆ.
ಸತೀಶ್ ಅವರ ಭೇಟಿಯ ಒಂದೆರಡು ದಿನಗಳ ನಂತರ, ಪೊಲೀಸ್ ಗುಪ್ತಚರ ತಂಡವು ನಿಡಗುಂದಿಗೆ ಭೇಟಿ ನೀಡಿತು, ಆದರೆ ಆ ಹೊತ್ತಿಗೆ ಕುಟುಂಬವು ಮನೆಯನ್ನು ಖಾಲಿ ಮಾಡಿತ್ತು. ವಿಚಾರಣೆ ನಡೆಸಲು ಮಹಿಳೆಯ ಕುಟುಂಬದ ಯಾರೊಬ್ಬರೂ ಗ್ರಾಮದಲ್ಲಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಗೋಕಾಕ್ನಿಂದ ಬಾಗಲಕೋಟೆ ಸಮೀಪದ ಕೂಡಲಸಂಗಮಕ್ಕೆ 162 ಕಿ.ಮೀ ದೂರ ಪ್ರಯಾಣಿಸಿದರೂ ಬಾಗಲಕೋಟೆ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಾಂಗ್ರೆಸ್ ಪಕ್ಷದ ಯಾರಿಗೂ ಸತೀಶ್ ನಿಡಗುಂದಿಗೆ ಭೇಟಿ ಕೊಟ್ಟ ಬಗ್ಗೆ ಮಾಹಿತಿ ಇಲ್ಲ ಎನ್ನುವುದು ಅಚ್ಚರಿಯಾದರೂ ಸತ್ಯ.
Laxmi News 24×7