ಫಾಸ್ಟ್‌ಟ್ಯಾಗ್ ಮೂಲಕ ತನ್ನ ದೈನಂದಿನ ಟೋಲ್ ಸಂಗ್ರಹವು ಶುಕ್ರವಾರ (ಫೆ. 26) ಸುಮಾರು 104 ಕೋಟಿ ರೂ. ತಲುಪಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ.
ಫೆಬ್ರವರಿ 16, 2021 ರಿಂದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಬಳಕೆದಾರರ ಶುಲ್ಕವನ್ನು ಕಡ್ಡಾಯಗೊಳಿಸಿದ ನಂತರ, ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಸಂಗ್ರಹವು ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ ಎಂದು ಅದು ಹೇಳಿದೆ.
“ಈ ವಾರದಲ್ಲಿ ಟೋಲ್ ಸಂಗ್ರಹವು ಪ್ರತಿದಿನ 100 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. 25.02.2021 ರಂದು, ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಸಂಗ್ರಹವು 64.5 ಲಕ್ಷಕ್ಕೂ ಹೆಚ್ಚು ವಹಿವಾಟುಗಳೊಂದಿಗೆ 103.94 ಕೋಟಿ ರೂ.ಗಳ ಗರಿಷ್ಠ ಮೊತ್ತವನ್ನು ತಲುಪಿದೆ” ಎಂದು ಎನ್‌ಎಚ್‌ಎಐ ಹೇಳಿಕೆಯಲ್ಲಿ ತಿಳಿಸಿದೆ.
ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಶೇಕಡಾ 20 ರಷ್ಟು ಮತ್ತು ಫಾಸ್ಟ್‌ಟ್ಯಾಗ್ ಮೂಲಕ ಬಳಕೆದಾರರ ಶುಲ್ಕವನ್ನು ಸಂಗ್ರಹಿಸುವ ವಿಷಯದಲ್ಲಿ ಶೇಕಡಾ 27 ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಅದು ಹೇಳಿದೆ.
ಕಳೆದ ಎರಡು ವಾರದಲ್ಲಿ 20 ಲಕ್ಷ ಹೊಸ ಫಾಸ್ಟ್‌ಟ್ಯಾಗ್ ಬಳಕೆದಾರರು ಸೇರಿದ್ದು, ಒಟ್ಟಾರೆ ಫಾಸ್ಟ್‌ಟ್ಯಾಗ್ ವಿತರಣೆಯ ಸಂಖ್ಯೆಯು 2.8 ಕೋಟಿ ರೂಪಾಯಿಗೆ ತಲುಪಿದೆ ಎಂದು ಎನ್‌ಎಚ್‌ಎಐ ಹೇಳಿದೆ. ಜೊತೆಗೆ ಫಾಸ್ಟ್‌ಟ್ಯಾಗ್ ಅನುಷ್ಠಾನವು ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು ಗಮನಾರ್ಹವಾಗಿ ಕಡಿಮೆಗೊಳಿಸಿದೆ, ಇದರ ಪರಿಣಾಮವಾಗಿ ಬಳಕೆದಾರರ ಅನುಭವ ಹೆಚ್ಚಾಗುತ್ತದೆ ಎಂದಿದೆ.
Laxmi News 24×7