Breaking News

ಗೋಕಾಕ್ ತಾಲ್ಲೂಕಿನ ಸಂಗನಕೇರಿಯಲ್ಲಿ ಭೀಕರ ಅಪಘಾತ : 5 ಜನರಿಗೆ ಗಂಭೀರ ಗಾಯ

Spread the love

ಗೋಕಾಕ : ತಾಲ್ಲೂಕಿನ ಸಂಗನಕೇರಿ ಸಮೀಪದಲ್ಲಿ ಟ್ರ್ಯಾಕ್ಟರ್ , ಮಿನಿ ಲೆಗ್ಜರಿ ವಾಹನ ನಡುವೆ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, 5ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರವಷ್ಟೇ ಸಂಗಕೇರಿಯಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ , ಬೈಕ್ ನಡುವೆ ಅಪಘಾತ ಸಂಭಿಸಿ, ಮಗು, ಪತಿ, ಪತ್ನಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದರು. ನೋವು ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭಿಸಿದ್ದು, ಜನರನ್ನು ಬೆಚ್ಚಿ ಬಿಳಿಸಿದೆ.

 

 

ಇಬ್ಬರ ಕಣ್ಣುಗಳಿಗೆ, ಓರ್ವರು ಬೆನ್ನು ಹುರಿ, ಇಬ್ಬರ ತಲೆ ಕಾಲುಗಳಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಅವರನ್ನು ಗೋಕಾಕದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳ ಹೆಸರು ತಿಳಿದು ಬಂದಿಲ್ಲ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಕೂಡ ಪೋನ ಮುಖಾಂತರ ಅಗತ್ಯ ನೆರವಿನ ಹಸ್ತ ಚಾಚಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ