Breaking News

ʻನಾನು ನಡೆದಿದ್ದೇ ದಾರಿʼ – ಬಂದ್‌ ಮಾಡಿದ್ದ ರೈಲ್ವೆ ಗೇಟ್‌ ಕಿತ್ತೆಸೆದು ಸಾಗಿದ ಒಂಟಿ ಸಲಗ

Spread the love

ಹಾಸನ: ದೈತ್ಯಾಕಾರದ ಒಂಟಿಸಲಗವೊಂದು  ರೈಲ್ವೆ ಗೇಟ್‌ನ್ನು  ಮುರಿದು ಹಾಕಿದ ಘಟನೆ ಸಕಲೇಶಪುರ ತಾಲೂಕಿನ ಹಸಿಡೆ ಗ್ರಾಮದಲ್ಲಿ ನಡೆದಿದೆ.

ನ.10ರ ರಾತ್ರಿ ವೇಳೆ ರೈಲ್ವೆ ಗೇಟ್ ಹಾಕಲಾಗಿತ್ತು. ಈ ವೇಳೆ, ಹಳಿ ದಾಟಲು ಬಂದ ಕಾಡಾನೆ ಗೇಟ್ ಮುರಿದು ಮುಂದೆ ಸಾಗಿದೆ. ಕಾಡಾನೆ ಗೇಟ್‌ ಮುರಿದು ಮುಂದೆ ಹೋಗುವ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಆರ್‌ಎಫ್‌ಓ ಹೇಮಂತ್ ಕುಮಾರ್ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ಒಂಟಿ ಸಲಗದ ಓಡಾಟದಿಂದ ಹಸಿಡೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದಾರೆ. ಗ್ರಾಮಸ್ಥರಿಗೆ ಕಾಡಾನೆ ಬಗ್ಗೆ ಇಟಿಎಫ್ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.


Spread the love

About Laxminews 24x7

Check Also

ಡಿಸೆಂಬರ್ ಅಂತ್ಯಕ್ಕೆ ವಿಜಯಪುರದಲ್ಲಿ ವಿಮಾನ ಹಾರಾಟ – ಎಂ.ಬಿ ಪಾಟೀಲ್

Spread the loveವಿಜಯಪುರ: ಇದೇ ಡಿಸೆಂಬರ್ ಅಂತ್ಯದೊಳಗೆ ವಿಜಯಪುರದಲ್ಲಿ ವಿಮಾನ ಹಾರಾಟ ಪ್ರಾರಂಭಗೊಳ್ಳಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ