Breaking News

ಬೆಳಗಾವಿಯಲ್ಲಿ ಎಲ್ ಆ್ಯಂಡ್ ಟಿ ಆಕ್ಸಿಜನ್ ಘಟಕ ಕಾರ್ಯಾರಂಭ

Spread the love

ಬೆಳಗಾವಿ-  ಬೆಳಗಾವಿಯಲ್ಲಿ ಆಮ್ಲಜನಕ ಕೊರತೆಯನ್ನು ಗಮನಿಸಿದ ಶಾಸಕ, ಅಭಯ ಪಾಟೀಲ ಆಮ್ಲಜನಕ ತಯಾರಿಕಾ ಘಟವನ್ನು ಸ್ಥಾಪಿಸುವಂತೆ ಎಲ್&ಟಿ ಕಂಪನಿಗೆ ವೈಯಕ್ತಿಕವಾಗಿ ವಿನಂತಿಸಿದ್ದರು.

ಅದಕ್ಕೆ ಸ್ಪಂದಿಸಿ, ಪ್ರತಿ ನಿಮಿಷಕ್ಕೆ 700 ಲಿಟರ್ ಅಂದರೆ (50 ರಿಂದ 60 ಹಾಸಿಗೆಗಳಿಗೆ 24 ಗಂಟೆಗಳ ಕಾಲ) ಆಮ್ಲಜನಕ ಪೂರೈಕೆ ಮಾಡುವಂತ ಘಟಕ ಸ್ಥಾಪನೆ ಮಾಡಿದ್ದಾರೆ.  ಘಟಕ ಶನಿವಾರದಿಂದ ಕಾರ್ಯಾರಂಭ ಮಾಡಿತು.

ಕರ್ನಾಟಕದಲ್ಲಿ ಮೊದಲನೆಯ ಭಾರಿಗೆ ಸಿಎಸ್ಆರ್ ಅನುದಾನ ಉಪಯೋಗಿಸಿ, ಎಲ್&ಟಿ ಕಂಪನಿಯ   ಆಮ್ಲಜನಕ ತಯಾರಿಕಾ ಘಟಕವನ್ನು ಬೆಳಗಾವಿಯಲ್ಲಿ ಸ್ಥಾಪಿಸಿದೆ.

ಕಾಮಗಾರಿ ಶಂಖುಸ್ಥಾಪನೆ ಮಾಡಿ 25 ದಿನಗಳಲ್ಲಿ ಆಮ್ಲಜನಕ ತಯಾರಿಕಾ ಘಟಕ ಕಾರ್ಯಾರಂಭ ಮಾಡಿದೆ.

ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಉಪಸ್ಥಿತರಿದ್ದರು.


Spread the love

About Laxminews 24x7

Check Also

ವಿಜಯಪುರ | ಭೂತನಾಳ ಕೆರೆಯಲ್ಲಿ 6 ಶವ ಪತ್ತೆ – ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಶಂಕೆ

Spread the loveವಿಜಯಪುರ: ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ  6 ಜನರ ಶವಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹಕ್ಕೆ ಕುಟುಂಬವೇ ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ