ಮುಂಬೈ: ಮಹಾರಾಷ್ಟ್ರದಲ್ಲಿ ಭೀಕರ ಮಳೆಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಪ್ರತಿಷ್ಠಿತ ಏರಿಯಾಗಳೆಲ್ಲಾ ಜಲಾವೃತವಾಗಿದೆ. ಮಂಖುರ್ಡ್ ಪ್ರದೇಶದಲ್ಲಿ ಭಾರಿ ಮಳೆಯ ನಡುವೆ ಛಾವಣಿಯ ಒಂದು ಭಾಗ ಕುಸಿದು 6 ಜನರು ಸಾವನ್ನಪ್ಪಿದ್ದು, ಓರ್ವ ವ್ಯಕ್ತಿಗೆ ಗಾಯವಾಗಿದೆ. ಭೂಕುಸಿತದಿಂದಾಗಿ ಪುಣೆಯ ಮಾವಲ್ ಗ್ರಾಮದಲ್ಲಿ ಹಲವು ಮನೆ ಮುಚ್ಚಿಹೋಗಿದ್ದು, ಮೂವರು ಸಾವನ್ನಪ್ಪಿದ್ದಾರೆ. 23ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ಮೇ ತಿಂಗಳಲ್ಲಿ ಲೋಕಾರ್ಪಣೆಗೊಂಡಿದ್ದ ಪುಣೆ-ಮುಂಬೈ ಎಕ್ಸ್ಪ್ರೆಸ್‌ವೇ ಖೋಪೋಲಿ-ಕುಸ್ಗಾಂವ್ ಸಮೀಪದ `ಮಿಸ್ಸಿಂಗ್ ಲಿಂಕ್’ ಟನಲ್ 2ರ ಬಳಿ ಭೂಕುಸಿತದಿಂದಾಗಿ 2 ತಿಂಗಳು ಬಂದ್ ಆಗುವ ಸಾಧ್ಯತೆ ಇದೆ. ಹೀಗಾಗಿ, ಭಾರೀ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಮುಂಬೈ-ಪುಣೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ 24 ಗಂಟೆಯಲ್ಲಿ ದಾಖಲೆಯ 300 ಮಿ.ಮೀ. ಮಳೆಯಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕದಳ, ಪೊಲೀಸರು ಹಲವೆಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಮುಂಬೈ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಖಾಸಗಿ ಕಂಪನಿಗಳು ವರ್ಕ್ಫ್ರಂ ಹೋಮ್‌ಗೆ ಸೂಚಿಸಿವೆ.
ಇನ್ನು, ಮುಂಬೈ, ಥಾಣೆ, ರಾಯಘಡ ಸೇರಿ ಹಲವು ಪ್ರದೇಶಗಳಲ್ಲಿ 2-3 ದಿನ ಭಾರಿ ಮಳೆಯ ಎಚ್ಚರಿಕೆ ಕೊಡಲಾಗಿದೆ. ಗುಜರಾತ್‌ನ ಅಮ್ರೇಲಿ ನ್ಯಾಷನಲ್ ಹೈವೇ ಕೂಡ ಕೊಚ್ಚಿ ಹೋಗಿದೆ. ಜಮ್ಮುಕಾಶ್ಮೀರದ ಕಿಶ್ತ್ವಾರ್, ಚೆನಾಬ್ ಕಣಿವೆಗಳಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತವಾಗಿವೆ. ಕಿಶ್ತ್ವಾರ್‌ನ 540 ಮೆಗಾವ್ಯಾಟ್ ಪವರ್ ಪ್ರಾಜೆಕ್ಟ್ ಬಳಿಯೇ ಭೂಕುಸಿತವಾಗಿದ್ದು, ಬೃಹತ್ ವಾಹನಗಳು ಮಣ್ಣಿನಲ್ಲಿ ಮುಚ್ಚಿಹೋಗಿವೆ. ಚೆನಾಬ್‌ನ ಬಗ್ಲಿಹಾರ್ ಡ್ಯಾಮ್ ಓಪನ್ ಮಾಡಲಾಗಿದೆ. ಅತ್ತ, ಭಾರತಕ್ಕೆ ಹೊಂದಿಕೊಂಡಂತಿರುವ ಚೀನಾ ಪ್ರಾಂತ್ಯಗಳಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
Laxmi News 24×7