Breaking News

ಜೂನ್ ತಿಂಗಳಲ್ಲಿ ಸಾಲು ಸಾಲು ಖಗೋಳ ವಿಸ್ಮಯ: ಆಗಸದಲ್ಲಿ ಮೂಡಲಿದೆ ಕೌತುಕ!

Spread the love

ಬೆಂಗಳೂರು: ಖಗೋಳ ಆಸಕ್ತರಿಗೆ ಹಾಗೂ ಸಾರ್ವಜನಿಕರಿಗೆ ಜೂನ್ ತಿಂಗಳು ವಿಶೇಷ ರಸದೌತಣ ನೀಡಲು ಸಜ್ಜಾಗಿದೆ. ಈ ತಿಂಗಳಲ್ಲಿ ಬ್ಯಾಕ್-ಟು-ಬ್ಯಾಕ್ ಎಂಬಂತೆ ಸಾಲು ಸಾಲು ಖಗೋಳ ವಿಸ್ಮಯಗಳು ಜರುಗಲಿದ್ದು, ಆಕಾಶದಲ್ಲಿ ಅಪರೂಪದ ಕೌತುಕಗಳು ಸೃಷ್ಟಿಯಾಗಲಿವೆ.

ವಿಶೇಷವೆಂದರೆ, ಈ ಅದ್ಭುತ ವಿದ್ಯಮಾನಗಳನ್ನು ಯಾವುದೇ ವಿಶೇಷ ಉಪಕರಣಗಳಿಲ್ಲದೆ ಬರಿಗಣ್ಣಿನಿಂದಲೇ ವೀಕ್ಷಿಸಿ ಕಣ್ತುಂಬಿಕೊಳ್ಳಬಹುದು. ಇತ್ತೀಚೆಗಷ್ಟೇ ನಡೆದ ‘ಗುರು-ಶುಕ್ರ ಸಂಯೋಗ’ದ ಅಪರೂಪದ ಘಟನೆ ಜನರಲ್ಲಿ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರೋಮಾಂಚಕ ವಿದ್ಯಮಾನಗಳು ಸಂಭವಿಸಲಿವೆ.

ಜೂನ್ 15 – ಸೂಪರ್ ಮೂನ್ ಡೇ 
ಜೂನ್ 15ರ ಅಮಾವಾಸ್ಯೆಯ ದಿನದಂದು ‘ಸೂಪರ್ ಮೂನ್’ ವಿದ್ಯಮಾನ ಸಂಭವಿಸಲಿದೆ. ಅಂದು ಚಂದಿರನು (Moon) ಎಂದಿಗಿಂತಲೂ ಭೂಮಿಗೆ ಕೊಂಚ ಹತ್ತಿರವಾಗಿ, ದೊಡ್ಡ ಗಾತ್ರದಲ್ಲಿ ಗೋಚರಿಸಲಿದ್ದಾನೆ.

ಸಾಮಾನ್ಯವಾಗಿ ಭೂಮಿಯಿಂದ ಚಂದ್ರನಿಗಿರುವ ಸರಾಸರಿ ದೂರ 3,84,000 ಕಿ.ಮೀ. ಆದರೆ ಅಂದು ಈ ದೂರ ಕೇವಲ 3,57,000 ಕಿ.ಮೀ ಗೆ ತಗ್ಗಲಿದೆ. ಈ ಕಾರಣದಿಂದ ಚಂದ್ರನು ಭೂಮಿಗೆ ಅತ್ಯಂತ ಸಮೀಪದಲ್ಲಿ ಕಾಣಿಸಿಕೊಳ್ಳಲಿದ್ದಾನೆ.

ಜೂನ್ 21 – ವರ್ಷದ ದೀರ್ಘ ಹಗಲು 
ಜೂನ್ 21ರಂದು ವರ್ಷದ ಅತ್ಯಂತ ಸುದೀರ್ಘವಾದ ಹಗಲು ದಿನ ಸಂಭವಿಸಲಿದೆ. ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಪರಿಭ್ರಮಿಸುವಾಗ, ಸೂರ್ಯನ ಕಡೆಗೆ ಹೆಚ್ಚು ವಾಲುವುದರಿಂದ ಈ ಅಪರೂಪದ ವಿದ್ಯಮಾನ ನಡೆಯುತ್ತದೆ. ಅಂದು ಹಗಲಿನ ಅವಧಿ ಹೆಚ್ಚಾಗಿರಲಿದ್ದು, ರಾತ್ರಿಯ ಅವಧಿ ಅತ್ಯಂತ ಕಡಿಮೆಯಿರುತ್ತದೆ.

ಜೂನ್ 29 – ಸ್ಟ್ರಾಬೆರಿ ಮೂನ್ 
ಜೂನ್ 29ರ ಹುಣ್ಣಿಮೆಯ ದಿನದಂದು ಆಕಾಶದಲ್ಲಿ ‘ಸ್ಟ್ರಾಬೆರಿ ಮೂನ್’ ಅನಾವರಣಗೊಳ್ಳಲಿದೆ. ಅಂದು ಚಂದ್ರನ ಪ್ರಕಾಶತೆ (ಬೆಳಕು) ಎಂದಿಗಿಂತಲೂ ಅತ್ಯಂತ ತೇಜಸ್ವಿಯಾಗಿ ಮತ್ತು ಆಕರ್ಷಕವಾಗಿ ಇರಲಿದೆ.


Spread the love

About Laxminews 24x7

Check Also

5 ಲಕ್ಷ ಜನರಿಗೆ ಉದ್ಯೋಗ, 1.5 ಕೋಟಿ ಮಾನವ ದಿನ ಸೃಷ್ಟಿಗೆ ಅವಕಾಶ: ಈಶ್ವರ್‌ ಖಂಡ್ರೆ

Spread the loveಬೆಂಗಳೂರು: ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ  ಬದಲಾದ ರೂಪ ವಿಬಿಜಿ ರಾಮ್ ಜಿ ಅಡಿಯಲ್ಲಿ  ಪ್ರತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ