ಬೆಂಗಳೂರು: ಬುಧವಾರ ಬೆಳಗ್ಗೆ 10 ಗಂಟೆಗೆ ಸಚಿವ ಸಂಪುಟ ಪಟ್ಟಿ ಬಿಡುಗಡೆ ಆಗಲಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾಳೆ ಬೆಳಗ್ಗೆ 10ಕ್ಕೆ ಕ್ಯಾಬಿನೆಟ್ ಫೈನಲ್ ಮಾಡ್ತಾರೆ. ಮಾಧ್ಯಮದಲ್ಲಿ ಸಂಭಾವ್ಯ ಸಚಿವರ ಹೆಸರು ಬರ್ತಿರೋದು ಅಧಿಕೃತವಲ್ಲ. ನಾಳೆ 10 ಗಂಟೆಗೆ ದೆಹಲಿಯಿಂದ ಲಿಸ್ಟ್ ಕಳಿಸ್ತಾರೆ. ಅದನ್ನ ನಾವೇ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು. ಅಲ್ಲದೇ, ಯಾರಿಗೆಲ್ಲಾ ಆಹ್ವಾನ ಹೋಗಿದೆಯೋ ಲೋಕಭವನಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.
ಪದಗ್ರಹಣಕ್ಕೆ ರಾಹುಲ್ ಖರ್ಗೆ ಬರ್ತಾರೆ. ಪ್ರಿಯಾಂಕಾ ಗಾಂಧಿ ಅವರು ಬರಲ್ಲ. ಅವರು ವಿದೇಶಿ ಪ್ರವಾಸದಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
Laxmi News 24×7