Breaking News

ಬೈಕ್ ಕಳ್ಳನ ಬಂಧನ: ಐದು ಬೈಕ್ ವಶಕ್ಕೆ

Spread the love

ಬೆಳಗಾವಿ: ಬೆಳಗಾವಿ ಹಿರೇಬಾಗೆವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಇತ್ತಿಚಿಗೆ ಜರುಗಿದ ಮೋಟಾರ ಸೈಕಲ್ ಕಳ್ಳತನ ಪ್ರಕರಣಗಳ ಪತ್ತೆ ಮಾಡುವ ಕುರಿತು ಬೆಳಗಾವಿ ನಗರದ ಪೊಲೀಸ್ ಆಯುಕ್ತರಾದ  ಬೊರಸೆ ಭೂಷಣ ಗುಲಾಬರಾವ ಮಾರ್ಗದರ್ಶನದಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ಹಿರೇಬಾಗೆವಾಡಿ ಪೊಲೀಸ್‌ ಠಾಣಿ ಅಪರಾಧ ಸಂಖ್ಯೆ : 02/2026 ಕಲಂ 303(2) ಬಿಎನ್‌ಎಸ್-2023 ಪ್ರಕರಣದಲ್ಲಿ ಆರೋಪಿ ಲಕ್ಷ್ಮಣ ವಿರುಪಾಕ್ಷಿ ಕಣಬರ್ಗಿ (31) ಎಂಬಾತನ್ನು ಬಂಧಿಸಲಾಗಿದೆ.

ಈತನ ಕಡೆಯಿಂದ ಹಿರೇಬಾಗೆವಾಡಿ ಪೊಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಅಂದಾಜು 2,55,000 ರೂಪಾಯಿ ಮೌಲ್ಯದ 5 ಬೈಕ್ ವಶಕ್ಕೆ‌ ಪಡೆಯಲಾಗಿದೆ.

ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎಸ್ ಕೆ ಹೊಳೆನ್ನವರ, ಪಿಎಸ್‌ಐ ಅವಿನಾಶ ಐ ಯರಗೊಪ್ಪ, ಪಿಎಸ್‌ಐ ಬಿ ಕೆ ಮಿಟಗಾರ ಹಾಗೂ ಸಿಬ್ಬಂದಿ ಎಂ ಐ ತುಮರಿ, ಪ್ರಭಾಕರ ಭೂಷಿ, ಆರ್ ಎಸ್ ಹಾಲ್ ಎಸ್ ಕೆಳಗಿನಮನಿ, ಮಹಾಂತೇಶ ಕಡೆನ್ನವರ, ಎಮ್ ಜಿ ಮಾಣಿಕಾರ ಇವರ ತಂಡ ಕರ್ತವ್ಯ ನಿರ್ವಹಿಸಿದ್ದು. ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.


Spread the love

About Laxminews 24x7

Check Also

5 ಲಕ್ಷ ಜನರಿಗೆ ಉದ್ಯೋಗ, 1.5 ಕೋಟಿ ಮಾನವ ದಿನ ಸೃಷ್ಟಿಗೆ ಅವಕಾಶ: ಈಶ್ವರ್‌ ಖಂಡ್ರೆ

Spread the loveಬೆಂಗಳೂರು: ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ  ಬದಲಾದ ರೂಪ ವಿಬಿಜಿ ರಾಮ್ ಜಿ ಅಡಿಯಲ್ಲಿ  ಪ್ರತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ