Breaking News

ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಪ್ರಾಣಿ– ಪಕ್ಷಿಗಳನ್ನು ಉರಿಬಿಸಿಲಿನಿಂದ ರಕ್ಷಿಸಲು ಅರಣ್ಯ ಇಲಾಖೆ ವಿಶೇಷ ಪ್ರಯತ್ನ

Spread the love

ಬೆಳಗಾವಿ ಸಮೀಪದ ಭೂತರಾಮನ ಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಪ್ರಾಣಿ– ಪಕ್ಷಿಗಳನ್ನು ಉರಿಬಿಸಿಲಿನಿಂದ ರಕ್ಷಿಸಲು ಅರಣ್ಯ ಇಲಾಖೆ ವಿಶೇಷ ಪ್ರಯತ್ನ ನಡೆಸಿದೆ. 37 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿರುವ ಈ ಮೃಗಾಲಯದಲ್ಲಿ 300ಕ್ಕೂ ಹೆಚ್ಚು ಪ್ರಭೇದಗಳ ಪ್ರಾಣಿ, ಪಕ್ಷಿಗಳಿವೆ. ಮೃಗಾಲಯದಲ್ಲಿರುವ ಪ್ರಾಣಿಗಳಿಗಾಗಿ ಎತ್ತರದಲ್ಲಿ ಸ್ಪ್ರಿಂಕ್ಲರ್‌ ಮೂಲಕ ಮಳೆ ಹನಿಗಳ ರೂಪದಲ್ಲಿ ನೀರು ಸಿಂಪಡಿಸಲಾಗುತ್ತಿದೆ. ಪ್ರಾಣಿಗಳ ಆರೋಗ್ಯವನ್ನು ನಿಯಂತ್ರಿಸಲು ವೈದ್ಯರು ವಿಶೇಷ ಮೆನು ಸಿದ್ಧಪಡಿಸಿದ್ದಾರೆ. ದೇಹದ ಉಷ್ಣಾಂಶ ಹಾಗೂ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ದೈನಂದಿನ ಆಹಾರದಲ್ಲಿ ತುಸು ಕಡಿಮೆ ಮಾಡಿ ಫ್ರೋಜನ್ ಫುಡ್‌ ನೀಡಲಾಗುತ್ತಿದೆ. ಪ್ರಾಣಿಗಳು ಆಶ್ರಯ ಪಡೆಯುವ ಕೊಠಡಿ, ಪಂಜರ, ಕಟ್ಟೆಗಳ ಮೇಲೂ ಮಂಜುಗಡ್ಡೆ ಇಡಲಾಗುತ್ತಿದೆ.


Spread the love

About Laxminews 24x7

Check Also

ಇಂದಿರಾ ಗಾಂಧಿ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ವಿವಾದ ಸೃಷ್ಟಿಸಿದ ಅಶೋಕ್ ಗೆಹ್ಲೋಟ್ ಹೇಳಿಕೆ

Spread the loveಜೈಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ ಬಿಜೆಪಿಯನ್ನು ಬ್ಯಾನ್ ಮಾಡಿರುತ್ತಿದ್ದರು ಎಂಬ ರಾಜಸ್ಥಾನದ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ