ಪೊಲೀಸ್ ಇಲಾಖೆಯಲ್ಲಿ 20 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಹವಾಲ್ದಾರ್ ಒಬ್ಬರು ಸ್ವಯಂ ಪ್ರೇರಿತವಾಗಿ ನಿವೃತ್ತಿ ಪಡೆಯುತ್ತಿದ್ದರು. ಅವರಿಗೆ ಸಾಕಷ್ಟು ಸಮಯ ತಿಳಿಸಿ ಹೇಳಿದ ನಂತರ ಎಸ್ಪಿ ಕೇಳಿದರು, “ಈ ಕೆಲಸವು ನಿಮಗೆ ಎಲ್ಲವನ್ನು ಕೊಟ್ಟಿದೇ, ಆದರೂ ಏಕೆ ಸ್ವಯಂ ನಿವೃತ್ತಿ ಪಡೆಯುತ್ತಿದ್ದೀರಿ?”
ಇದಕ್ಕೆ, ಹವಾಲ್ದಾರ್ ಸುಂದರವಾದ ಮತ್ತು ಮಾರ್ಮಿಕವಾಗಿ ಹೃದಯಸ್ಪರ್ಶಿ ಉತ್ತರವನ್ನು ನೀಡಿದರು:
“ಸರ್, ನೀವು ನಿಮ್ಮ ಮುಂದೆ ಖಾಲಿ ಕುರ್ಚಿಗಳಿದ್ದರೂ ಸಹ.” ನನಗೆ ಎರಡು ಗಂಟೆಗಳ ಕಾಲ ಸಾವಧಾನವಾಗಿ ನಿಲ್ಲಿಸಿಕೊಂಡು ತಿಳಿಸಿ ಹೇಳಿದ್ದೀರಿ, ನಾನು ಇದೇ ಕಾರಣಕ್ಕಾಗಿ ಕೆಲಸವನ್ನು ಬಿಟ್ಟು ಹೋಗುತ್ತಿದ್ದೇನೆ,
ಆಕಾಶ ಬೇವಿನಕಟ್ಟಿ
ನಿಮಗೆ ಗೌರವ ಸಿಗದ ಸ್ಥಳದಲ್ಲಿ ನಿಮ್ಮ ಚಪ್ಪಲಿ ಸಹ ಬೀಡ ಬೇಡಿ ಎಂಬ ಬಾಬಾಸಾಹೇಬರ ಮಾತು ನೆನಪಿಸಿತು.
ಆ ವ್ಯಕ್ತಿಗೆ 20 ವರ್ಷದಿಂದ ಯಾವ ಮಟ್ಟದ ಅವಮಾನ, ಅಗೌರವದ ಬದುಕನ್ನು ಸಾಗಿಸಿರಬಹುದು ಒಬ್ಬ ಪೋಲಿಸ್ ವ್ಯಕ್ತಿ ಅನುಭವಿಸಿದ ಮಾತುಗಳನ್ನು ಒಂದೇ ಒಂದು ವಾಕ್ಯದಲ್ಲಿ ತುಂಬಾ ಮಾರ್ಮಿಕವಾಗಿ ಮಾತನಾಡಿ ತಿಳಿಸಿದ್ದಾರೆ, ಮೇಲು ಕೀಳು ಎಂಬುದನ್ನು ಬಿಟ್ಟು, ಎಷ್ಟೇ ದೊಡ್ಡ ಅಧಿಕಾರ ಇದ್ದರು ಪರಸ್ಪರ ಗೌರವ ಮುಖ್ಯ.
ಮಾಡುವ ಕೆಲಸದಿಂದ ವ್ಯಕ್ತಿಯ ವ್ಯಕ್ತಿತ್ವ ಅಳಿಯದೆ ಅವನ ಪ್ರಾಮಾಣಿಕತೆ ಕೆಲಸ ನಡೆ ನುಡಿ ಜ್ಞಾನದ ಮುಂದೆ ಯಾವುದು ಮುಖ್ಯ ಅಲ್ಲಾ ಸ್ವಾಭಿಮಾನದಿಂದ ಬದುಕುವ ಬದುಕೇ ಸ್ವಾರ್ಥಕ ಬದುಕು.
Laxmi News 24×7