Breaking News

ಗೋಮಾತಾ ಗೌರವ ದಿನದ ಪ್ರಯುಕ್ತ ಗೋ ಸಂರಕ್ಷಣೆಗಾಗಿ ಹಸುವಿನ ಸಮೇತ ಪ್ರತಿಭಟನೆ

Spread the love

 ಬೆಳಗಾವಿ : ಗೋಮಾತಾ ಗೌರವ ದಿನದ ಪ್ರಯುಕ್ತ ನಗರದಲ್ಲಿ ಸೋಮವಾರ ಗೋ ರಕ್ಷಣೆಯ ಜಾಗೃತಿಗಾಗಿ ಗೋವು ಸಮೇತ ರ‌್ಯಾಲಿ ಕೈಗೊಳ್ಳಲಾಯಿತು.
ನಗರದ ಅಂಬೇಡ್ಕರ ಉದ್ಯಾನದಿಂದ ಆರಂಭಗೊಂಡ ಗೋ ಮಾತಾ ಗೌರವ ಅಭಿಯಾನ ಸಂಘಟನೆಯ ನೇತೃತ್ವದ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ಗೋ ಭಕ್ತರು, ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಚನ್ನಮ್ಮ ವೃತ್ತದ ಮೂಲಕ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ತೆರಳಿ ಮನವಿ ಸಲ್ಲಿಸಿದರು.
ಗೋವುಗಳಿಗೆ ರಾಷ್ಟ್ರೀಯ ಗೌರವದ ಅಧಿಕೃತ ಸ್ಥಾನ ನೀಡಬೇಕು. ದೇಶಾದ್ಯಂತ ಗೋ ಹತ್ಯೆ ಸಂಪೂರ್ಣ ನಿಷೇಧಿಸಬೇಕು. ಗೋ ಹತ್ಯೆ ಮತ್ತು ಗೋವುಗಳ ಕಳ್ಳ ಸಾಗಣಿಕೆಯಲ್ಲಿ ತೊಡಗಿದವರಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಗೋವು ಕಳ್ಳಸಾಗಣಿಕೆಯ ವಾಹನಗಳನ್ನು ಶಾಶ್ವತ ಮುಟ್ಟುಗೋಲು ಹಾಕಿಕೊಳ್ಳಬೇಕು. ಗೋ ಮೂತ್ರ ಉತ್ಪನ್ನಗಳನ್ನು ಉತ್ತೇಜಿಸಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಬೃಹತ್ ಮಾರಾಟ ಮಳಿಗೆಗಳಲ್ಲಿ ದೇಸಿ ಗೋವಿನ ಹೈನುಗಾರಿಕೆ ಉತ್ಪನ್ನ, ಸಗಣಿ, ಗೋ ಮೂತ್ರಗಳಿಗೆಗೆ ಕಡ್ಡಾಯವಾಗಿ ಕೌಂಟರ್ ರಚಿಸಬೇಕು ಎಂದು ಆಗ್ರಹಿಸಿದರು.
ನಿಲೇಶ ಪಾಟೀಲ, ಪ್ರಕಾಶ ಲದ್ವಾ, ರಾಜ್ಯಸ್ಥಾನದ ಗೋಲ್ವಾನಂದ ಸ್ವಾಮೀಜಿ, ಆನಂದ ನವಲೆ, ಮಾರುತಿ ಕೋಳಿ, ರವಿ ಕೋಕಿತಕರ, ಭರತ ಪಾಟೀಲ, ಕಿರಣ ಗಾವಡೆ ಇತರರಿದ್ದರು.

Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ