Breaking News

ಮದುವೆಗೆ ಆಹ್ವಾನಿಸಿದ್ದ ಯುವಕನಿಗೆ ಬಂತು ಪ್ರಧಾನಿ ಮೋದಿಯಿಂದ ಶುಭಾಶಯ ಪತ್ರ

Spread the love

ರಾಯಚೂರು: ಪ್ರಧಾನಿ ನರೇಂದ್ರ ಮೋದಿಗೆ  ಮದುವೆ ಆಹ್ವಾನ ಪತ್ರ ಕಳುಹಿಸಿದ್ದ ರಾಯಚೂರಿನ  ಯುವಕನಿಗೆ ಇದೀಗ ಪ್ರಧಾನಿ ಕಚೇರಿಯಿಂದ ಮದುವೆ ಶುಭಾಶಯ ಪತ್ರ ಬಂದಿದ್ದು, ಯುವಕ ಖುಷಿ ವ್ಯಕ್ತಪಡಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕಾನಿಹಾಳ ಗ್ರಾಮದ ರಾಜೇಶ್ ನಾಯಕ್ ಅವರು ಪ್ರಧಾನಿ ಮೋದಿಗೆ ಮದುವೆ ಆಹ್ವಾನ ಪತ್ರಿಕೆಯನ್ನ ಕಳುಹಿಸಿದ್ದರು. ಈಗ ಪ್ರಧಾನಿ ಕಚೇರಿಯಿಂದ ನವ ದಂಪತಿಗೆ ಶುಭಾಶಯ ಪತ್ರ ಬಂದಿದೆ. ಪ್ರತಿಯಾಗಿ ಶುಭಾಶಯ ಬರಬಹುದು ಎನ್ನುವ ನಿರೀಕ್ಷೆಯಲ್ಲೇ ಲಗ್ನ ಪತ್ರಿಕೆಯನ್ನ ಪೋಸ್ಟ್ ಮಾಡಿ, ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದರು

ಏ.13ರಂದು ರಾಜೇಶ್ ನಾಯಕ್ ಹಾಗೂ ಸವಿತಾ ಮದುವೆ ನಡೆದಿದ್ದು, ಕೊನೆಗೂ ನವಜೋಡಿಗೆ ಪ್ರಧಾನಿ ಮೋದಿಯಿಂದ ಶುಭಾಶಯ ಪತ್ರ ಬಂದಿದೆ. ದಾಂಪತ್ಯ ಜೀವನಕ್ಕೆ ಶುಭ ಹಾರೈಸಿ ಪತ್ರ ಬರೆದಿದ್ದು, ಪ್ರಧಾನಿ ಕಚೇರಿಯಿಂದ ಪತ್ರ ಬಂದಿರುವುದಕ್ಕೆ ರಾಜೇಶ್ ಅವರು ಖುಷಿ ವ್ಯಕ್ತಪಡಿಸಿ, ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ