Breaking News

ಮದುವೆಯಾಗಿ ಒಂದೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತ

Spread the love

ಉಡುಪಿ : ಸಂಶಯದ ಸುಳಿಯಲ್ಲಿ ಯುವಕನ ಆತ್ಮಹತ್ಯೆ?

ಮದುವೆಯಾಗಿ ಒಂದೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ ಸುದೀಪ್ ಶೆಟ್ಟಿ

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ನಡೆದ ಘಟನೆ

ಮೃತ ಸುದೀಪ್ ಮೂಲತಃ ನೆಲ್ಯಾಡಿ ನಿವಾಸಿ.

ಮೃತನ ಪತ್ನಿಯ ವಿರುದ್ಧ ದೂರು ನೀಡಿದ ಸುದೀಪ್ ತಂದೆ

ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಸೊಸೆಯ ವಿರುದ್ಧವೇ ದೂರು

ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಸುದೀಪ್ ಹಾಗೂ ಸೌಮ್ಯ ಶೆಟ್ಟಿ

ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಆಗಿರುವ ಸೌಮ್ಯ ಶೆಟ್ಟಿ

ಸೌಮ್ಯ ಶೆಟ್ಟಿ ಮೂಲತಃ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ

ಫೆಬ್ರವರಿ 17ರಂದು ಪುತ್ತೂರು ತಾಲೂಕಿನ ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಗಿದ್ದ ಜೋಡಿ

ಈ ಹಿಂದೆ ಒಂದು ಮದುವೆಯಾಗಿ ಪತಿಗೆ ಡೈವೋರ್ಸ್ ನೀಡಿದ್ದ ಸೌಮ್ಯ

ಸೌಮ್ಯ ಜೊತೆ ವಿವಾಹದ ಬಗ್ಗೆ ಸುದೀಪ್ ಕುಟುಂಬದ ಆಕ್ಷೇಪ

ಈ ಹಿನ್ನೆಲೆಯಲ್ಲಿ ಒಂದೇ ತಿಂಗಳಲ್ಲಿ ಬಿಗಡಾಯಿಸಿದ ಸಂಬಂಧ

ಮಾನಸಿಕ ಒತ್ತಡದಿಂದ ಸುದೀಪ್ ವಿಷ ಸೇವಿಸಿರುವ ಸಾಧ್ಯತೆ

ಆದರೆ ಸೊಸೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಸುದೀಪ್ ತಂದೆ ದಾಮೋದರ್ ಆರೋಪ

ಫೆಬ್ರವರಿ 17ರಂದು ಮದುವೆ ನೋಂದಣಿ

ಮಾರ್ಚ್ 17 ರಂದು ಕಡಬ ತಾಲೂಕಿನ ನೆಲ್ಯಾಡಿಯಲ್ಲಿದ್ದ ಸುದೀಪ್

ಈ ವೇಳೆ ಅಲ್ಲಿಗೆ ಬಂದ ಸೌಮ್ಯ ಬೆದರಿಕೆ ಹಾಕಿರುವುದಾಗಿ ಆರೋಪ

ಬಳಿಕ ಕಾರ್ಕಳಕ್ಕೆ ವಾಪಸ್ ಆಗಿದ್ದ ಸುದೀಪ್

ಮಾರ್ಚ್ 22 ರಂದು ಸುದೀಪ್ ವಿಷ ಸೇವಿಸಿರುವ ಮಾಹಿತಿ ನೀಡಿದ ಸೌಮ್ಯ ಸಂಬಂಧಿಕರು

ಮಾ.23 ರಂದು ವಿಷ ಸೇವಿಸಿದ ಸುದೀಪ್ ನನ್ನು ನಿಟ್ಟೆಯ ಗಜಾರಿಯ ಆಸ್ಪತ್ರೆಗೆ ಸೇರಿಸಿದ್ದ ಸೌಮ್ಯ

ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ರವಾನೆ

ಮಾರ್ಚ್ 24ರಂದು ಮಂಗಳೂರಿನ ಏನಪೋಯ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಸುದೀಪ್ ತಂದೆ

ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸುದೀಪ್ ಸಾವು

ಸಾವಿನ ಬೆನ್ನಲ್ಲೇ ಆತ್ಮಹತ್ಯೆಗೆ ಪ್ರಚೋದನೆ ಕೇಸ್

ಸುದೀಪ್ ಮನೆಯವರು ಸ್ಥಿತಿವಂತರಾಗಿದ್ದು ಮದುವೆ ಬಗ್ಗೆ ಕುಟುಂಬದಲ್ಲಿ ಅಸಮಾಧಾನ

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ನಗರ ಪೊಲೀಸರು

ಮಂಗಳೂರಿನ ಎನಪೋಯ ಆಸ್ಪತ್ರೆಯಲ್ಲಿ ಪೋಸ್ಟ್ಮಾರ್ಟಮ್

ಪೋಸ್ಟ್ ಮಾರ್ಟಂ ವರದಿ ಆಧರಿಸಿ ಮುಂದಿನ ತನಿಖೆ ಎಂದಿರುವ ಕಾರ್ಕಳ ಪೊಲೀಸರು


Spread the love

About Laxminews 24x7

Check Also

ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಕೊಲೆಗಳು ಆಗಬಾರದು: ಪ್ರಮೋದ್ ಮುತಾಲಿಕ್

Spread the love ಉಡುಪಿ, ಜು.29: ಸುರತ್ಕಲ್ ನಲ್ಲಿ ಯುವಕನೋರ್ವನ ಕೊಲೆ ಯಾವ ಕಾರಣಕ್ಕೆ ಆಗಿದೆಯೆಂಬುದು ಗೊತ್ತಿಲ್ಲ. ಆದರೆ ಕ್ರಿಯೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ