Breaking News

ಮಾನವೀಯತೆಯನ್ನ ಮಾರಿಕೊಂಡ ವಿಕ್ಟೋರಿಯಾ ಆಸ್ಪತ್ರೆ..!?

Spread the love

ಫೆವಿಕಲ್ ಕುಡಿದು 2 ವರ್ಷದ ಮಗು ಮೃತಪಟ್ಟಿತ್ತು. ಪೋಸ್ಟ್ ಮಾರ್ಟಂ ಗೆ ವಿಕ್ಟೋರಿಯಾ ಆಸ್ಪತ್ರೆಗೆ ಶವ ತೆಗೆದುಕೊಂಡು ಹೋಗಿದ್ರು. ರಾಜಸ್ಥಾನ ರಾಜ್ಯದಿಂದ ಬಂದ ಕುಟುಂಬ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡ್ತಿತ್ತು. ಆಟ ಆಡುವಾಗ ಮಗು ಫೆವಿಕಲ್ ಕುಡಿದು ಜೀವ ಬಿಟ್ಟಿತ್ತು. ಪೋಸ್ಟ್ ಮಾರ್ಟಂ ಮಾಡಲು ಅಲ್ಲಿನ ಸಿಬ್ಬಂಧಿ, ಮಧ್ಯವರ್ತಿಗಳು ಸೇರಿ 10 ಸಾವಿರ ಹಣ ಪೀಕಿದ್ದಾರೆ. ಬೆಳಗ್ಗೆಯಿಂದ ಮಗುವಿನ ತಂದೆ ಆಸ್ಪತ್ರೆಯ ಆವರಣದಲ್ಲಿ ಕಂಡ ಕಂಡವ್ರ ಬಳಿ ಕೈ ಚಾಚಿ ದುಡ್ಡು ಹೊಂದಿಸಿದ್ದಾರೆ. ಮಗನ ಮೃತದೇಹ ತೊಗೊಳ್ಳೋದಕ್ಕೆ ಭಿಕ್ಷೆ ಬೇಡಿದ್ದಾರೆ. ಆ ದುಡ್ಡು ಸಾಕಾಗಿಲ್ಲ ಅಂತ ಸಂಬಂಧಿಕರು, ಸ್ನೇಹಿತರಿಂದ ಹಣ ಹಾಕಿಸಿಕೊಂಡು ಕೊಟ್ಟಿದ್ದಾರೆ. ಆದ್ರೂ ಆಸ್ಪತ್ರೆಯ ಸಿಬ್ಬಂಧಿಗಳಿಗೆ ಹಣದಾಹ ತೀರಿಲ್ಲ.

ಪೋಸ್ಟ್ ಮಾರ್ಟಂ ಮಾಡುವ ವೈದ್ಯರಿಗೆ ಈ ಹಣ ಹೋಗುತ್ತಾ.? ಅಥ್ವಾ ಡಾಕ್ಟರ್ಸ್ ಗಳ ಹೆಸ್ರು ಹೇಳಿಕೊಂಡು ಅಲ್ಲಿನ‌ ಸಿಬ್ಬಂಧಿಗಳು ಲಂಚ ಪೀಕುತ್ತಿದ್ದಾರಾ..? ಗೊತ್ತಿಲ್ಲ…
ಮೃತದೇಹ ಕೊಡಲು 30 ಸಾವಿರಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಖಾಸಗಿ ಆಂಬ್ಯೂಲೆನ್ಸ್ ಚಾಲಕನೊಬ್ಬನಿಂದ ಹಣ ಕಲೆಕ್ಟ್ ಮಾಡಲು ಹೇಳಿದ್ದಾರೆ. ಅದರಂತೆ ಆಂಬ್ಯೂಲೆನ್ಸ್ ಚಾಲಕ ಡೆತ್ ಸರ್ಟಿಫಿಕೇಟ್ ಹಾಗೂ ಪೋಸ್ಟ್ ಮಾರ್ಟಂ ಖರ್ಚು ಅಂತ 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾನೆ. ಇಷ್ಟು ಹಣ ಕೊಡಲಾಗದೇ ಮಗುವಿನ ತಂದೆ ಮೃತದೇಹವನ್ನೇ ಬಿಟ್ಟು ಕಣ್ಣೀರು ಹಾಕ್ಕೊಂಡು ಆಸ್ಪತ್ರೆಯ ಆವರಣದಿಂದ ಹೊರ ಬಂದಿದ್ದಾರೆ.

ಅದ್ಯಾಕೆ ನನಗೆ ಕಾಲ್ ಮಾಡಬೇಕು ಅನಿಸಿತೋ.. ಗೆಳೆಯ ಫೋನ್ ಮಾಡಿ ಮಗುವಿನ ತಂದೆಯ ಜೊತೆ ಕಾನ್ಫಾರೆನ್ಸ್ ಕಾಲ್ ನಲ್ಲಿ ಮಾತನಾಡಿಸಿದ್ರು. ಕಾಲಿಗೆ ಬೀಳ್ತಿನಿ ಸರ್ ಮಗನ ಶವ ಕೊಟ್ರೆ ಮಣ್ಣು ಮಾಡ್ಕೊತಿವಿ ಅಂತ ಅಂಗಲಾಚುತ್ತಿದ್ರು. ಕೂಡಲೇ ಅಲ್ಲಿನ ವೈದ್ಯರಿಗೆ ಕಾಲ್ ಮಾಡಿದೆ. ಇದ್ಯಾವುದು ಗಮನಕ್ಕಿಲ್ಲ ಅಂದ್ರು. ಕೂಡಲೇ ಪರಿಶೀಲಿಸ್ತಿವಿ ಅಂದ್ರು.

ಮಗುವಿನ ಮೃತದೇಹಕ್ಕಾಗಿ ಭಿಕ್ಷೆ ಬೇಡಿ 10 ಸಾವಿರ ಹಣ ಜಮಾಯಿಸಿದ ತಂದೆಗೆ, ಮೃತದೇಹವೇ ಸಿಕ್ಕಲ್ಲ ಅಂದ್ರೆ ಹೇಗಿರಬೇಡ..? ಮಗುವಿನ ಮೃತದೇಹವನ್ನೇ ಬಿಟ್ಟೊಗೋದಕ್ಕೆ ಮನಸ್ಸು ಮಾಡಿದ್ದಾರೆ ಅಂದ್ರೆ ಅವ್ರಿಗೆ ಅದೆಷ್ಟೋ ಆರ್ಥಿಕ ಸಮಸ್ಯೆ ಇರಬೇಡ..!?

ಮಗುವಿನ ತಂದೆಯ ಜೊತೆ ಮಾತನಾಡ್ತಾ, ನಿಮ್ಗೆ ಹಣ ಕೇಳಿದವ್ರಿಗೆ ಫೋನ್ ಕೊಡಿ ಅಂದೆ. ಅವ್ರು ಆಸ್ಪತ್ರೆಯ ಹೊರಗಿಂದ ಓಡೋಡಿ ಹೋಗಿ ಫೋನ್ ಕೊಟ್ರು. ಅವ್ರ ಜೊತೆ ಮಾತನಾಡಿದೆ. ಯಾರಿಗೆ ದುಡ್ಡು, ಎಷ್ಟು ದುಡ್ಡು, ಯಾಕೆ ದುಡ್ಡು ಅಂತ ಕೇಳಿದೆ. ಯಾರ್ಯಾರಿಗೆ ಎಷ್ಟು ಹೋಗುತ್ತೆ. ಯಾರು ದುಡ್ಡು ಕಲೆಕ್ಟ್ ಮಾಡಿಸೋರು ಅಂತ ಕೇಳಿದೆ. ಅವ್ರು ಬಾಯಿಬಿಟ್ರು.

ಆಮೇಲೆ ಯಾರ್ ಜೊತೆ ಮಾತಾಡ್ತಿದಿವಿ ಅಂತ ಅವ್ರಿಗೆ ಗೊತ್ತಾಯ್ತು. ತಪ್ಪಾಯ್ತು ಸರ್. ಮೊದ್ಲೇ ಹೋಳೋದಲ್ವಾ ನಿಮ್ ಕಡೆಯವ್ರು ಅಂತ ಅಂದ್ರು. ಫೋನ್ ಮಾಡಿದ ಎರಡೇ ನಿಮಿಷಕ್ಕೆ ಮೃತದೇಹವನ್ನ ಒಂದು ರೂಪಾಯಿ ಇಲ್ಲದೇ ಕೊಟ್ರು. ಆ ವೇಳೆಗಾಗಲೇ 10 ಸಾವಿರ ಹಣವನ್ನ ಸೆಕ್ಯೂರಿಟಿಯಿಂದ ಹಿಡ್ಕೊಂಡು ಸಿಬ್ಬಂದಿ ತನಕ ಕೊಟ್ಕೊಂಡು ಬಂದಿದ್ರು. ಮಗನ ಮೃತದೇಹವನ್ನ ರಾಜಸ್ಥಾನದ ತಮ್ಮೂರಿಗೆ ತೊಗೊಂಡೊಗಲು ಅವ್ರ ಬಳಿ ಕಾಸು ಕೂಡ ಇರಲಿಲ್ಲ. ಸ್ನೇಹಿತನೊಬ್ಬನಿಗೆ ಫೋನ್ ಮಾಡಿ ಒಂದು ವ್ಯವಸ್ಥೆ ಮಾಡಿಸಿಕೊಡು ಅಂತ ಹೇಳಿದೆ.‌ ನನ್ ಮೇಲಿನ ಗೌರವಕ್ಕೆ ಮೂವರಿಗೆ ಫ್ಲೈಟ್ ಟಿಕೆಟ್ ಮಾಡಿಸಿ ಕಳಿಸಿಕೊಟ್ರು. ಮೃತದೇಹವನ್ನ ತಮ್ಮೂರಿಗೆ ತೊಗೊಂಡೋದ್ರು. ಅವ್ರ ಕುಟುಂಬ ಫೋನ್ ಮಾಡಿ ನಿಮ್ಮನ್ನ ಭೇಟಿ ಮಾಡ್ತಿವಿ ಸರ್. ಯಾವತ್ತು ನಿಮ್ಮನ್ನ ಮರೆಯೋದಿಲ್ಲ.‌ ನೀವು ಚೆನ್ನಾಗಿರಬೇಕು ಅಂತ ಹಾರೈಸಿದ್ರು. ಮಗನ ಸಾವಿನಲ್ಲೂ ಉಪಕಾರ ಮಾಡಿದವ್ರನ್ನ ಮರೆಯಲಿಲ್ಲ ಆ ಬಡ ಕುಟುಂಬ.

ಇಂತಹ ಬಡ ಕುಟುಂಬದ ಬಳಿ ಹಣಕ್ಕೆ ಹಿಂಸೆ ಮಾಡ್ತಾರೆ ಅಂದ್ರೆ ಇವ್ರಿಗೆ ಏನ್ ಹೇಳ್ಬೇಕು.‌ ಹೆಣದ ಮೇಲೂ ಹಣ ಮಾಡುವ ಇವ್ರ ಮನಸ್ಸು ಅದೆಷ್ಟು ವಿಕೃತಿಯಾಗಿರಬೇಡ. ಇದು ಒಂದೇ ಪ್ರಕರಣವಲ್ಲ. ನಿತ್ಯ ಇದೇ ಸಮಸ್ಯೆ.
ಇವತ್ತು ಕೂಡ ಹಣ ಕೊಟ್ಟಿಲ್ಲ ಅಂತ ಮೃತದೇಹವನ್ನ ಕೊಟ್ಟಿಲ್ಲ ಒಬ್ರಿಗೆ. ಸರ್ಕಾರ, ಪೊಲೀಸ್ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು. ಹಣಕ್ಕಾಗಿ ಹಿಂಸೆ ಮಾಡೋರನ್ನ ಒದ್ದು ಒಳಗೆ ಹಾಕಬೇಕು.

ದುಡ್ಡಿಲ್ಲ ಅಂದ್ರೆ ಬಡವರಿಗೆ ಯಾವುದೇ ವ್ಯವಸ್ಥೆ ಇಲ್ಲ..

ಸಾಯುವುದೇ ಒಂದೇ ವ್ಯವಸ್ಥೆ 🥹🥹🥹🥹


Spread the love

About Laxminews 24x7

Check Also

ಒಂದು ವಾರ ಸಹಕಾರ ಕೊಟ್ಟರೆ ಹೋಟೆಲ್‌ಗಳಿಗೆ ಸಿಲಿಂಡರ್ ಕೊಡ್ತೀವಿ: ಕೆ.ಹೆಚ್. ಮುನಿಯಪ್ಪ

Spread the loveಬೆಂಗಳೂರು: ಒಂದು ವಾರ ಹೋಟೆಲ್‌ಗಳು  ಗ್ಯಾಸ್ ಸಿಲಿಂಡರ್‌ಗಾಗಿ  ಸಹಕಾರ ಕೊಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ