Breaking News

ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ

Spread the love

ಬೆಳಗಾವಿ : ಟಿಳಕವಾಡಿಯ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಮಾ.13ರಿಂದ 15ರವರೆಗೆ 16ನೇ ಸರಣಿಯ ಎಂ.ಕೆ.ನಂಬಿಯಾರ್ ಸ್ಮರಣಾರ್ಥ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಚೇರ್ಮನ್ ಆರ್.ಎಸ್.ಮುತಾಲಿಕ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಹಳೇ ವಿದ್ಯಾರ್ಥಿ, ಮಾಜಿ ಅಟಾರ್ನಿ ಜನರಲ್ ಪದ್ಮವಿಭೂಷಣ ಕೆ.ಕೆ. ವೇಣುಗೋಪಾಲ್ ಪ್ರಾಯೋಜಕತ್ವದಲ್ಲಿ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ 9 ರಾಜ್ಯಗಳಿಂದ ಒಟ್ಟು 30 ತಂಡಗಳು ಭಾಗವಹಿಸಲಿವೆ. ಉಚ್ಚ ನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಯಾಲಯದ ಸುಮಾರು 50 ಹಿರಿಯ ವಕೀಲರು ಮತ್ತು ಶಿಕ್ಷಣ ತಜ್ಞರು ಮೂಟ್ ನ್ಯಾಯಾಧೀಶರಾಗಿ ಮೌಲ್ಯಮಾಪನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಶುಕ್ರವಾರ(ಮಾ.13) ಸಂಜೆ 5.30ಕ್ಕೆ ಕೆಎಲ್‌ಎಸ್ ಪ್ಲಾಟಿನಂ ಜ್ಯುಬಿಲಿ ಕಟ್ಟಡದ ಕೆ.ಕೆ.ವೇಣುಗೋಪಾಲ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಎಂ. ಸ್ಪರ್ಧೆಗೆ ಚಾಲನೆ ನೀಡುವರು. ಕೆಎಲ್ಎಸ್ ಅಧ್ಯಕ್ಷ ಪ್ರದೀಪ ಸಾವಕಾರ ಹಾಗೂ ಕಾರ್ಯಾಧ್ಯಕ್ಷ ಎ.ಕೆ.ಟಗಾರೆ ಉಪಸ್ಥಿತರಿರುವರು. ಈಚೆಗೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಸಂಸ್ಥೆಯ 8 ಹಳೇ ವಿದ್ಯಾರ್ಥಿಗಳಾದ ಮೌನೇಶ ಬಡಿಗೇರ, ನವೀನ ಕೋಪಾರ್ಡೆ, ಹಳ್ಯಾಳಪ್ಪ, ಪ್ರಿಯಂಕಾ ರಾಜಗೊಳ್ಕರ, ಜಗದೀಶ ಕಿತ್ತೂರು, ಶ್ರೇಯಾ ಉತ್ತೂರೆ, ವಿಜಯಕುಮಾರ ಬುದ್ರಿ ಮತ್ತು ನಾಗರಾಜ ತಳವಾರರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಮಾ.15ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ವಿಜಯಕುಮಾರ  ಪಾಟೀಲ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಒಟ್ಟು ರೂ. 1.35 ಲಕ್ಷ ರೂ. ನಗದು ಬಹುಮಾನ ಹಾಗೂ ಶ್ರೇಷ್ಠ ವಾಗ್ಮಿಗೆ ಹಿರಿಯ ವಕೀಲ ಅಶೋಕ  ಪೋತದಾರ ಅವರ ಹೆಸರಿನಲ್ಲಿ 6 ಸಾವಿರ ರೂ. ನಗದು ಬಹುಮಾನ ಇರಲಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಸ್.ವಿ.ಗಣಾಚಾರಿ, ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ, ಸ್ಪರ್ಧೆಯ ಸಂಯೋಜಕಿ ಪ್ರೊ.ಅಶ್ವಿನಿ ಪರಬ್, ಕಾರ್ಯದರ್ಶಿ ಸುನಿಧಿ ಜೋಶಿ, ಮಂಜುನಾಥ ಕಾಳೆ ಸುದ್ದಿಗೋಷ್ಠಿಯಲ್ಲಿದ್ದರು.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ