Breaking News

ಯುವತಿ ಆತ್ಮಹತ್ಯೆ ಕೇಸ್ – ಜೆಡಿಎಸ್ ಮುಖಂಡೆ ಪುತ್ರನಿಗೆ ಜಾಮೀನು ಮಂಜೂರು

Spread the love

ಕಾರವಾರ: ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಜೆಡಿಎಸ್ ಮುಖಂಡೆ ಪುತ್ರನಿಗೆ ಧಾರವಾಡ ವಿಭಾಗೀಯ ಪೀಠ ಜಾಮೀನು ಮಂಜೂರು ಮಾಡಿದೆ.

ಆರೋಪಿ ಚಿರಾಗ್ ಕೊಠಾರಕರ್‌ಗೆ ಕೋರ್ಟ್ ಜಾಮೀನು ನೀಡಿದೆ. ಯುವತಿ ಆತ್ಮಹತ್ಯೆ ಕೇಸಲ್ಲಿ ಈತನನ್ನು ಜ.29 ರಂದು ಕದ್ರಾ ಪೊಲೀಸರು ಚೆನೈನಲ್ಲಿ ಬಂಧಸಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ಆರೋಪಿ ಜೈಲಿನಲ್ಲಿದ್ದ. ಕೊನೆಗೂ ಚಿರಾಗ್‌ಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ.

ರಿಶೇಲ್ ಡಿಸೋಜಾ ಎಂಬ ಯುವತಿಯನ್ನು ಚಿರಾಗ್ ಪ್ರೀತಿಸುತ್ತಿದ್ದ. ರಿಶೇಲ್ ಡಿಸೋಜಾ ಜ.10 ರಂದು ಕದ್ರಾದ ಕೆಪಿಸಿ ಕಾಲೊನಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ನಮ್ಮ ಪುತ್ರಿಗೆ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದ ಎಂದು ಚಿರಾಗ್ ವಿರುದ್ಧ ಯುವತಿ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು.

ಚಿರಾಗ್ ಬಂಧಿಸುವಂತೆ ಆಗ್ರಹಿಸಿ ರಿಶೇಲ್ ಕುಟುಂಬ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಿತ್ತು. ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಾಗಿತ್ತು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ