ಬೆಳಗಾವಿ: ಸರ್ಕಾರಿ ಕರ್ತವ್ಯದ ಮೇಲಿದ್ದ ಉಪ-ನೊಂದಣಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿ ಹಾಗೂ ಧಮ್ಕಿ ಹಾಕಿದ್ದ ಆರೋಪಿಯನ್ನು ಮೂಡಲಗಿ ಪೊಲೀಸರು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.
ಗೋಕಾಕ ಸೋಮವಾರ ಪೇಟೆಯ ನಿವಾಸಿ ಹಾಗೂ ಬಾಂಡ್ ರೈಟರ್ ಆಗಿರುವ ಆನಂದ ಸಿದ್ದಲಿಂಗಪ್ಪಾ ಗೊಟಡಕಿ ( 52) ಬಂಧಿತ ಆರೋಪಿ. ಈತನು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿದ್ದಾನೆಂದು ಮೂಡಲಗಿ ಉಪ-ನೊಂದಣಿ ಅಧಿಕಾರಿ ದುರದುಂಡೆಪ್ಪಾ ಕೆಂಪಣ್ಣಾ ಕುಳ್ಳೂರ ಅವರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರು ಆದರಿಸಿದ ಪೊಲೀಸರು ಆರೋಪಿ ಆನಂದನನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.
ಘಟನೆ ವಿವಿರ: ದೂರುದಾರರಾದ ಮೂಡಲಗಿ ಉಪ-ನೊಂದಣಿ ಅಧಿಕಾರಿ ದುರದುಂಡೆಪ್ಪಾ ಕೆಂಪಣ್ಣಾ ಕುಳ್ಳೂರ ಅವರು ಸನ್-2026, ಪೆಬ್ರುವರಿ 1 ಪ್ರಭಾರ ವಹಿಸಿಕೊಂಡು ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿರುವಾಗ ಆರೋಪಿತನಾದ ಬಾಂಡ್ ರೈಟರ್ ಆನಂದ ಸಿದ್ದಲಿಂಗಪ್ಪಾ ಗೊಟಡಕಿ ಅವರು ಮೂಡಲಗಿ ತಾಲ್ಲೂಕಾ ಹದ್ದಿ ಪೈಕಿ ಜಮೀನ ಸರ್ವೇ ನಂಃ 521/11 ಕ್ಷೇತ್ರ 15 ಗುಂಟೆ 8 ಆಣಿ ಜಮೀನವನ್ನು ಅಪಸಾತ ವಾದ್ಯ ನೊಂದಣಿ ಮಾಡಿಸುವ ಸಲುವಾಗಿ ಕಾವೇರಿ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಅಪಸಾತ ವಾಟಿ ಮಾಡಲು ಅವರು ಜಂಟಿ ಖಾತೆದಾರರು, (ಉಆದ ವಾರಸುದಾರರು) ಇರುವುದಿಲ್ಲಾ ಹೀಗಾಗಿ ನೊಂದಣಿ ಮಾಡಲು ಬರುವುದಿಲ್ಲಾ ವಂಶಾವಳ (ವಾರಸಾ ರ್ಸಪೀಕೇಟ್) ತೆಗೆದುಕೊಂಡು ಬರಬೇಕು ಅಂತಾ ಸೂಚನೆ ನೀಡಿದ್ದರು.
ಆರೋಪಿ ಅನಂದ ಅವರು ಗ್ರಾಮ ಆಡಳತ ಅಧಿಕಾರಿ (ವಿಲೇಜ್ ಅಂಕೌಂಟ್) ಗಳಿಂದ ಕೈ ಬರಹದ ವಂಶಾವಳಿ (ವಾರಸುದಾರ ಪ್ರಮಾಣಪತ್ರ) ತೆಗೆದುಕೊಂಡು ಬಂದು ಹಾಜರುಪಡಿಸಿದಾಗ ನೀವು ತಹಶೀಲ್ದಾರ್ ಕಡೆಯಿಂದ ವಂಶಾವಳ ತೆಗೆದುಕೊಡು ಬಂದಾಗ ಅದು ಹೊಂದಾಣಿಕೆ ಆದಲ್ಲಿ ನೊಂದಣಿ ಮಾಡಿಕೊಡುವುದಾಗಿ ತಿಳಿಸಲಾಗಿತ್ತು. ಆದರೆ ಆರೋಪಿತ ಆನಂದ ಭೂ ಮಾಪಕರು 5 ಗುಂಟೆ ಕ್ಕಿಂತ ಕಡಿಮೆ ಇದ್ದಲ್ಲಿ 11ಇ ನಕ್ಷೆ ಮಾಡಿ ಕೊಡುತ್ತಿಲ್ಲ ನಿನಗೆ ಎಷ್ಟು ಹಣ ಬೇಕು ತೆಗೆದುಕೊಂಡು ನೊಂದಣಿ ಮಾಡಲೇಬೇಕು? ಇಲ್ಲದಿದ್ದರೆ ನಿನ್ನನ್ನು ಎನೂ ಮಾಡಬೇಕು ಅಂತಾ ಗೊತ್ತು ಎನ್ನುವ ಮೂಲಕ ಸರ್ಕಾರಿ ಕರ್ತವ್ಯದ ಮೇಲಿದ್ದ ವಿದ್ಯಾವಿದಾರ ಉಪ-ನೊಂದಣಿ ಅಧಿಕಾರಿ ದುರದುಂಡೆಪ್ಪಾ ಕೆಂಪಣ್ಣಾ ಕುಳ್ಳೂರ ಅವರಿಗೆ ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಧಮ್ಕಿ ಹಾಕಿದ್ದಾನೆ. ಆಗ ಉಪ-ನೊಂದಣಿ ಅಧಿಕಾರಿ ದುರದುಂಡೆಪ್ಪಾ ಕೆಂಪಣ್ಣಾ ಕುಳ್ಳೂರ ಅವರು ಬಾಂಡ್ ರೈಟರ್ ಆನಂದ ವಿರುದ್ಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಕೊಂಡು ಪೊಲೀಸರು ಆರೋಪಿತನಿಗೆ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ತನಿಖೆ ಕೈಕೊಂಡಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7