Breaking News

ಉಗಾರದ ಪದ್ಮಾವತಿ ಮಂದಿರ ಸಮುದಾಯ ಭವನ ಹಾಗೂ ಮುಂಭಾಗದಲ್ಲಿ ಆರ್‌ಸಿಸಿ ಕಾಮಗಾರಿಗಾಗಿ 65 ಲಕ್ಷ ರೂಪಾಯ್ ಕಾಮಗಾರಿಗೆ ಶಾಸಕ ರಾಜು ಕಾಗೆ ಪೂಜೆ ನೆರವೇರಿಸಿದರು.

Spread the love

ಉಗಾರದ ಪದ್ಮಾವತಿ ಮಂದಿರ ಸಮುದಾಯ ಭವನ ಹಾಗೂ ಮುಂಭಾಗದಲ್ಲಿ ಆರ್‌ಸಿಸಿ ಕಾಮಗಾರಿಗಾಗಿ 65 ಲಕ್ಷ ರೂಪಾಯ್ ಕಾಮಗಾರಿಗೆ ಶಾಸಕ ರಾಜು ಕಾಗೆ ಪೂಜೆ ನೆರವೇರಿಸಿದರು.
ಲಕ್ಷಾಂತರ ಭಕ್ತರ ಶ್ರದ್ಧೆ ಸ್ಥಾನವಾಗಿರುವ ಉಗಾರದ ಶ್ರೀ ಪದ್ಮಾವತಿ ಮಂದಿರದ ಸಮುದಾಯ ಭವನ ನಿರ್ಮಿಸಲು ಅಲ್ಪಸಂಖ್ಯಾತ ಇಲಾಖೆಯಿಂದ 50 ಲಕ್ಷ ಹಾಗೂ ಶಾಸಕರ ಅನುದಾನದ 15 ಲಕ್ಷ ರೂಪಾಯ ಹೀಗೆ 65 ಲಕ್ಷ ರೂಪಾಯ್ ಬಳಸಿ ಮಂದಿರದ ಅಂಗಳದಲ್ಲಿ ಆರ್ ಸಿ ಸಿ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಶಾಸಕ ರಾಜು ಕಾಗೆ ಪೂಜೆ ನೆರವೇರಿಸಿದರು.
ಮಂಗಳವಾರ ಬೆಳಿಗ್ಗೆ ಉಘಾರದ ಪದ್ಮಾವತಿ ಮಂದಿರದ ಅಂಗಳದಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುವಾಗ ಶಾಸಕ ರಾಜು ಕಾಗೆ ಇವರು ಶ್ರೀ ಪದ್ಮಾವತಿ ದೇವಿಯ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ ಅವರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಲು ಮಂದಿರದ ಮುಖ್ಯಸ್ಥ ಶೀತಲ್ ಪಾಟೀಲ್ ಪ್ರತ್ನಿಸುತ್ತಿದ್ದಾರೆ. ಅವರಿಗೆ ಸಹಕರಿಸಲು ಹಾಗೂ ದೇವಿಯ ಆಶೀರ್ವಾದ ನಮಗೂ ಆಗಲಿ ಈ ಕಾರಣ ಸೇವೆ ನೀಡಿದ್ದೇನೆ ನನ್ನ ಜೀವನದಲ್ಲಿ ಯಾವುದೇ ರಾಜಕೀಯ,ಪಕ್ಷ, ಜಾತೀಯತೆ ಮಾಡದೆ ಸಮಸ್ಯೆ ಮಂಡಿಸಿದವರ ಎಲ್ಲರಿಗೆ ಸ್ಪಂದಿಸಿದ್ದೇನೆ ಎಂದು ಹೇಳಿದರು.
ಪದ್ಮಾವತಿ ಮಂದಿರದ ಮುಖ್ಯಸ್ಥರು ಹಾಗೂ ಕರ್ನಾಟಕ ರಾಜ್ಯ ಜೈನ ಅಸೋಸಿಯೇಷನ್ ಉಪಾಧ್ಯಕ್ಷ
ಶೀತಲಗೌಡ ಪಾಟೀಲ ಮಾತನಾಡುವಾಗ ಶಾಸಕ ರಾಜು ಕಾಗೆ ಇವರಿಗೆ ಎರಡು ಬೇಡಿಕೆಗಳನ್ನು ಮುಂದೆ ಇಟ್ಟಾಗ ಯಾವುದೇ ಸಂಕೋಚ ಪಡದೆ ಅನುದಾನ ಮಂಜೂರು ಗೊಳಿಸಿದ್ದಾರೆ. ಅವರಿಗೆ ಗ್ರಾಮ ಹಾಗೂ ದೇವರ ಭಕ್ತರಿಂದ ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿದರು.
ಸಮಾರಂಭದಲ್ಲಿ ಅರ್ಚಕ ಅಶೋಕ್ ಉಪಾಧ್ಯೆ, ಭರತ್ ಉಪಾಧ್ಯೆ ಇವರಿಂದ ಮಂತ್ರೋಪಚಾರ ಮುಖಾಂತರ ಪೂಜೆ ನೆರವೇರಿಸಲಾಯಿತು, ಶಾಸಕ ರಾಜು ಕಾಗೆ ಹಾಗೂ ಶೀತಲಗೌಡ ಪಾಟೀಲ ಇವರು ಪೂಜೆ ನೆರವೇರಿಸಿದರು.
ಈ ವೇಳೆ ವಿಫಲ
ಪಾಸಗೌಡ ಪಾಟೀಲ, ಅನ್ನಾ ಗೌಡ ಪಾಟೀಲ, ದೀಪಕ್ ಪಾಟೀಲ, ಇಂಜಿನಿಯರ್ ಆದೇಶ ಹೊಸವಾಡೆ, ಭರತೇಶ್ ಖಂಡಿರಾಜುರಿ, ದಾದಾ ಅಳಪ್ಪನವರ, ಸುರೇಶ್ ವಸವಾಡೆ,
ಅನಾಸಾಹೇಬ ಪಾಂಗರೆ, ಶುಭಾಷ ಖಂಡೇರಜೂರಿ, ಅನಿಲ್ ಸದಲಗೆ, ಗುತ್ತಿಗೆದಾರರು ಸಂದೀಪ್ ಖರಾಡೆ ಸೇರದಂತೆ ಅನೇಕರು ಇದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ