Breaking News

ಚೆನ್ನೈ ಮಾಲಾಧಾರಿ ಜೀವ ಉಳಿಸಿದ ಗೋಕಾಕ ಹೊಟೆಲ್ ಉದ್ಯಮಿ ಪ್ರಭಾಕರ ಶೆಟ್ಟಿ

Spread the love

ಚೆನ್ನೈ ಮಾಲಾಧಾರಿ ಜೀವ ಉಳಿಸಿದ ಗೋಕಾಕ ಹೊಟೆಲ್ ಉದ್ಯಮಿ ಪ್ರಭಾಕರ
ಬೆಟ್ಟ ಏರುವಾಗ ಕುಸಿದ ವ್ಯಕ್ತಿಯ ಜೀವ ಉಳಿಸಿದ ಪ್ರಭಾಕರ ಶೆಟ್ಟಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುವ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಚೆನ್ನೈಮೂಲದ ಮಾಲಾಧಾರಿಯೊಬ್ಬರಿಗೆ ಬೆಳಗಾವಿ ನಗರದ ಹೋಟೆಲ್ ಉದ್ಯಮಿ ಪ್ರಭಾಕರ ಶೆಟ್ಟಿ ಅವರುತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ ಘಟನೆ ಕೇರಳದ ನೀಲಿಮಲೆ ಬೆಟ್ಟದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆಬಂದಿದೆ.
ಬೆಳಗಾವಿ ನಗರದ ಪ್ರಭಾಕರ ಶೆಟ್ಟಿ ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವ ನೀಲಿಮಲೆ ಬೆಟ್ಟದಲ್ಲಿ ಈ ಘಟನೆ ನಡೆದಿದ್ದು,
ಚಳಿ ಹಾಗೂ ತಂಪಿಗೆ ಹೃದಯಾಘಾತಹೆಚ್ಚಾಗುತ್ತದೆಂದು ನನಗೆ ಅಲ್ಪಸ್ವಲ್ಪ ಗೊತ್ತಿತ್ತು.
ಹೀಗಾಗಿ ಅವರು ಅಸ್ವಸ್ಥಗೊಂಡಾಗ ಇದು ಹೃದಯಾಘತವೆಂದು ತಿಳಿದು ಎದೆ ಮೇಲೆ ನನ್ನ ಕೈಗಳನ್ನು ಇಟ್ಟು ಪಂಪ್ ಮಾಡಿದೆ. ಸ್ವಲ್ಪ ಹೊತ್ತಿಗೆ ಅವರಿಗೆ ಪ್ರಜ್ಞೆ ಬಂತು.
ನಿಜವಾಗಿಯೂ ಅಯ್ಯಪ್ಪನೇ ಇವರನ್ನು ಉಳಿಸಿದನು, ಅದು ನನ್ನ ಕೈಯಿಂದ ಇಂತಹ ಒಳ್ಳೆಯ ಕೆಲಸ ಮಾಡಿಸಿದ್ದಾನೆಂದು ಭಾವುಕನಾದೆ.
ಅನಾರೋಗ್ಯಗೊಂಡ ಅಯ್ಯಪ್ಪ ಮಾಲಧಾರಿ ಶೀಘ್ರದಲ್ಲಿ ಚೇತರಿಸಿಕೊಂಡು ಗುಣಮುಖರಾಗಲೆಂದು ಅಯ್ಯಪ್ಪ ಸ್ವಾಮಿಯಲ್ಲಿ ಸನ್ನಿಧಾನದಲ್ಲಿ ಪ್ರಾರ್ಥಿಸಿದ್ದೇನೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ