ಖಾನಾಪೂರ ಡಾ. ಅಂಬೇಡ್ಕರ್ ಬ್ರಿಗೇಡ್’ನ ಪದಾಧಿಕಾರಿಗಳಿಂದ ಪದಗ್ರಹಣ
ಮಾಜಿ ಶಾಸಕ ಅರವಿಂದ ಪಾಟೀಲ್ ಭಾಗಿ ಗ್ರಾಮದಲ್ಲಿ ಭವ್ಯ ಮೆರವಣಿಗೆ
ಖಾನಾಪೂರದಲ್ಲಿ ನೂತನವಾಗಿ ಕಾರ್ಯಾರಂಭಿಸಿದ ಡಾ. ಅಂಬೇಡ್ಕರ್ ಬ್ರಿಗೇಡ್’ನ ತಾಲೂಕಾ ಪದಾಧಿಕಾರಿ ಪದಗ್ರಹಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಖಾನಾಪೂರದಲ್ಲಿ ನೂತನವಾಗಿ ಕಾರ್ಯಾರಂಭಿಸಿದ ಡಾ. ಅಂಬೇಡ್ಕರ್ ಬ್ರಿಗೇಡ್’ನ ತಾಲೂಕಾ ಪದಾಧಿಕಾರಿ ಪದಗ್ರಹಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮೊದಲಿಗೆ ಗ್ರಾಮದಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ಶಿವಸ್ಮಾರಕ ವೃತ್ತಕ್ಕೆ ತಲುಪಿದ ಪದಾಧಿಕಾರಿಗಳು ಛತ್ರಪತಿ ಶಿವಾಜೀ ಮಹಾರಾಜ ಮೂರ್ತಿಗೆ ಮಾರ್ಲಾಪಣೆ ಮಾಡಿ ಜಯಘೋಷಗಳನ್ನು ಕೂಗಿದರು.
ನಂತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಖಾನಾಪೂರದ ಮಾಜಿ ಶಾಸಕ ಅರವಿಂದ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಡಾ. ಅಂಬೇಡ್ಕರ್ ಬ್ರಿಗೇಡ್’ನ ತಾಲೂಕಾ ಪದಾಧಿಕಾರಿ ಮತ್ತು ಸದಸ್ಯರು ಭಾಗಿಯಾಗಿದ್ಧರು.
Laxmi News 24×7