Breaking News

ಭತ್ತದ ಕಟಾವಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ದಾವಣಗೆರೆಯಲ್ಲಿ ಖರೀದಿ ಕೇಂದ್ರ ಬಂದ್

Spread the love

ದಾವಣಗೆರೆ: ಭತ್ತದ ಕಟಾವಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಇದೇ ಸಮಯಕ್ಕೆ ದಾವಣಗೆರೆಗೆಯಲ್ಲಿ ಭತ್ತದ ಖರೀದಿ ಕೇಂದ್ರ ಬಂದ್​​​​ ಆಗಿದ್ದು, ಹೆಕ್ಟೇರ್​ಗಟ್ಟಲೇ ಬೆಳೆದ ಭತ್ತದ ದರ ಕುಸಿಯುವ ಆತಂಕದಲ್ಲಿ ಅನ್ನದಾತರಿದ್ದಾರೆ.

ಭತ್ತದ ಕಣಜ ದಾವಣಗೆರೆ, ಖರೀದಿ ಕೇಂದ್ರ ಬೇಕೇ ಬೇಕು: ಭತ್ತವನ್ನು ಮಧ್ಯ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಕೊಪ್ಪಳದ ಗಂಗಾವತಿ ಬಿಟ್ಟರೆ ದಾವಣಗೆರೆಯಲ್ಲಿ ಭತ್ತವನ್ನು ಕಾಂಪಿಟೇಶನ್​​ ಮೇಲೆ ಬೆಳೆಯುತ್ತಾರೆ. ಭದ್ರಾ, ತುಂಗಾಭದ್ರಾ ಜಲಾಶಯ ತುಂಬಿದರೆ ಕರ್ನಾಟಕದಲ್ಲಿ ಅಕ್ಕಿಗೇನು ಕೊರತೆ ಇಲ್ಲ ಅನ್ನೋ ಮಾತು ಈಗಲೂ ಪ್ರಚಲಿತದಲ್ಲಿದೆ. ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬರೋಬ್ಬರಿ 1.60 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. 4.5 ಲಕ್ಷ ಮೆಟ್ರಿಕ್ ಟನ್ ಭತ್ತ ಇಳುವರಿ ಬರುತ್ತದೆ.

ನಡೆಸಬೇಕಿತ್ತು ನೋಂದಣಿ ಪ್ರಕ್ರಿಯೆ: ಜಿಲ್ಲಾಡಳಿತ ಭತ್ತದ ಖರೀದಿ ಕೇಂದ್ರವನ್ನು ಪ್ರಾರಂಭ ಮಾಡುತ್ತೇವೆ ಎಂದು ಕೇವಲ ಅದೇಶವನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ ಸೆಪ್ಟಂಬರ್ 15 ರಿಂದ ಅಕ್ಟೋಬರ್ 30ರ ವರೆಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆದರೆ ಈ ಪ್ರಕ್ರಿಯೆ ಪ್ರಾರಂಭವಾಗಿ 26 ದಿನಗಳು ಕಳೆದರೂ ಕೂಡ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ನಂತರ ನೋಂದಣಿ ಕೇಂದ್ರಕ್ಕೆ ಬೀಗ ಜಡಿದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ