Breaking News

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸಂಬಂಧ ಸಿಎಂ ಕಾರಿನ ಮೇಲೆ ದಾಖಲಾದ ಪ್ರಕರಣ ಸಂಬಂಧ ದಂಡ ಪಾವತಿ

Spread the love

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಶೇ.50 ರಷ್ಟು ದಂಡ ಪಾವತಿಗೆ ಸರ್ಕಾರ ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಸವಾರರು ದಂಡ ಕಟ್ಟುವಲ್ಲಿ ನಿರತರಾಗಿದ್ದಾರೆ. ಇದುವರೆಗೂ 40 ಕೋಟಿಗಿಂತ ಹೆಚ್ಚು ದಂಡ ಪಾವತಿಸಿದ್ದಾರೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಾರಿನ ಮೇಲಿನ ಪ್ರಕರಣಗಳ ಸಂಬಂಧ ಕೂಡ ದಂಡ ಪಾವತಿಯಾಗಿದೆ.

ಸಿಎಂ ಕಾರಿನ ಮೇಲೆ 7 ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುವ ಇನೋವಾ-ಕ್ರಿಸ್ಟಾ ಕಾರು 2024ರಿಂದ ಈವರೆಗೂ ಏಳು ಸಂಚಾರ ನಿಯಮಗಳ ಉಲ್ಲಂಘಿಸಿವೆ. ಈ ಪೈಕಿ ಆರು ಪ್ರಕರಣಗಳು ಸಿಎಂ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ್ದಾರೆ. ಶೇ.50ರಷ್ಟು ರಿಯಾಯಿತಿಗೆ ಅನುಸಾರ 2,500 ರೂಪಾಯಿ ದಂಡವಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ಬೆನ್ನಲೇ ಶುಕ್ರವಾರ ದಂಡ ಪಾವತಿಯಾಗಿದೆ ಸಂಚಾರ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

CM SIDDARAMAIAH  TRAFFIC VIOLATION  BENGALURU  FINE FOR TRAFFIC VIOLATION

ಆರು ಬಾರಿ ಸೀಟು ಬೆಲ್ಟ್ ಧರಿಸದ ಸಿಎಂ: ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪೈಕಿ ಆರು ಪ್ರಕರಣಗಳಲ್ಲಿ ಸಿದ್ದರಾಮಯ್ಯ ಅವರು ಕಾರಿನ ಮುಂಭಾಗದಲ್ಲಿ ಕುಳಿತುಕೊಂಡರೂ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ್ದಾರೆ. ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂನಲ್ಲಿ (ಐಟಿಎಂಎಸ್) ಸಂಚಾರ ನಿಯಮ ಉಲ್ಲಂಘಿಸಿರುವುದು ಸೆರೆಯಾಗಿದೆ.

2024ರ ಜನವರಿ 24ರಂದು ಮಧ್ಯಾಹ್ನ 12.19ರಂದು ಒಲ್ಡ್ ಏರ್ ಪೋರ್ಟ್ ರಸ್ತೆಯ ಲೀಲಾ ಪ್ಯಾಲೇಸ್ ಜಂಕ್ಷನ್ ಬಳಿ ಹೋಗುವಾಗ ಸಿದ್ದರಾಮಯ್ಯ ಅವರು ಸೀಟು ಬೆಲ್ಟ್ ಧರಿಸಿಲ್ಲ. ಅದೇ ಜಂಕ್ಷನ್​ನಲ್ಲಿ ಫೆಬ್ರುವರಿ ಹಾಗೂ ಆಗಸ್ಟ್​ನಲ್ಲಿ ಮತ್ತೆರಡು ಪ್ರಕರಣಗಳು ದಾಖಲಾದರೆ ಮಾಚ್​ನಲ್ಲಿ ಚಂದ್ರಿಕಾ ಹೊಟೇಲ್ ಜಂಕ್ಷನ್ ಹಾಗೂ ಆಗಸ್ಟ್​ನಲ್ಲಿ ಶಿವಾನಂದ ಸರ್ಕಲ್ ಹಾಗೂ ಡಾ.ರಾಜ್ ಕುಮಾರ್ ಪ್ರತಿಮೆ ಜಂಕ್ಷನ್​​ಗಳ ಬಳಿ ಸೀಟು ಬೆಲ್ಟ್ ಧರಿಸಿದ ನಿಯಮ ಉಲ್ಲಂಘಿಸಿರುವುದು ದಾಖಲಾಗಿದೆ.

ಈ ವರ್ಷ ಜುಲೈ 9ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ ಪೋರ್ಟ್ ಎಕ್ಸ್ ಪ್ರೆಸ್ ಕಾರಿಡಾರ್​ನಲ್ಲಿ ಸಿಎಂ ಅವರಿದ್ದ ಕಾರು ಓವರ್ ಸ್ಟೀಡಾಗಿ ಚಲಿಸಿ ನಿಯಮ ಉಲ್ಲಂಘಿಸಿದೆ. ಸದ್ಯ ಕಾರಿನ ಮೇಲಿದ್ದ ದಂಡ ಪಾವತಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಸಲು ಶೇ 50ರಷ್ಟು ರಿಯಾಯಿತಿ ಆಫರ್ ನೀಡಲಾಗಿದೆ. ನಿಯಮ ಉಲ್ಲಂಘಿಸಿದ ಸವಾರರು ದಂಡ ಪಾವತಿಸುತ್ತಿದ್ದಾರೆ. ಇದೀಗ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸಿಎಂ ಕಾರಿನ ಪ್ರಕರಣಗಳ ಸಂಬಂಧ ಕೂಡ ದಂಡ ಪಾವತಿಯಾಗಿದೆ.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಅವರು ಚಾಲನೆ

Spread the loveರಾಮದುರ್ಗ: ಪ್ರತಿ ವಾರ ನಡೆಯುವ ಶ್ರೇಷ್ಠ ಫೌಂಡೇಶನ್ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಇಂದು ಶಾಸಕ ರಮೇಶ್ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ