ಬೆಳಗಾವಿ 25: ಸರ್ವದಾನಗಳಲ್ಲಿ ರಕ್ತದಾನ ಮಹಾದಾನವಾಗಿದೆ. ರಕ್ತದಾನವನ್ನು ಮಾಡುವುದರಿಂದ ಒಬ್ಬ ರೋಗಿಯ ಜೀವನ ಉಳಿಸಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯು ರಕ್ತದಾನ ಮಾಡಿ ಸಾಮಾಜಿಕ ಸೇವೆಯಲ್ಲಿ ತೊಡಗಬೇಕೆಂದು 26 ಕಮಾಂಡಿAಗ್ ಆಫೀಸರ್ ಕರ್ನಲ್ ಸುನಿಲ್ ದಾಗರ್ ಹೇಳಿದರು.
ಅವರು ಬೆಳಗಾಮ್ ಬ್ಲಡ್ ಬ್ಯಾಂಕ್ ಸೆಂಟರ್ ಸಹಯೋಗದಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯವು ಸದೃಢವಾಗಿರುವುದು. ಹೃದಯ ಸಂಬAಧಿ ಕಾಯಿಲೆಗಳು ಸಂಭವಿಸುವುದಿಲ್ಲ. 18 ಮೀರಿದ ವಿದ್ಯಾರ್ಥಿಗಳು ರಕ್ತದಾನವನ್ನು ಮಾಡ ಬಹುದು. ಸದೃಢ ಆರೋಗ್ಯಕ್ಕೆ ರಕ್ತದಾನಗಳು ಮತದಾನವಾಗಿದೆ. ಎನ್ ಸಿ ಸಿ ಎಡೆಟ್ ಗಳು ರಕ್ತದಾನ ಮಾಡಿ ಸಾಮಾಜಿಕ ಜಾಗೃತಿ ಉಂಟು ಮಾಡಬೇಕು ಹಾಗೂ ಆರೋಗ್ಯ ಇಲಾಖೆಯ ಕೈಜೋಡಿಸಬೇಕೆಂದು ಹೇಳಿದರು. ರಕ್ತದಾನದಲ್ಲಿ 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಬೆಳಗಾವಿಯ ಜಾದವ್ ನಗರದಲ್ಲಿ 26 ಕರ್ನಾಟಕ ಎಂಸಿಸಿ ಭಟಾಲಿಯನ ಆಯೋಜಿಸಿರುವ 10 ದಿನಗಳ ವಾರ್ಷಿಕ ಶಿಬಿರದಲ್ಲಿ ಬೆಳಗಾವಿ ಜಿಲ್ಲೆ ವಿವಿಧ ತಾಲೂಕುಗಳಿಂದ 500ಕ್ಕೂ ಹೆಚ್ಚು ಎನ್ಸಿಸಿ ಕೆಡೆಟ್ಗಳು ಪಾಲ್ಗೊಂಡಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶಸ್ತ್ರ ತರಬೇತಿ, ಡ್ರಿಲ್, ಮ್ಯಾಪ್ ರೀಡಿಂಗ್, ನಾಯಕತ್ವ ತರಬೇತಿ, ಬೌದ್ಧಿಕ ಮಾನಸಿಕ ಶರೀರಿಕ ತರಬೇತಿಗಳನ್ನು ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಏಡಂ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಸಿದ್ದಾರ್ಥ ರೆಡೂ, ಮೇಜರ್ ಡಾ.ಮಹೇಶ್ ಗುರನಗೌಡರ, ಸುಬೇದಾರ್ ಮೇಜರ್ ಕಲ್ಲಪ್ಪ ಪಾಟೀಲ್, ಬೆಳಗಾಂ ಬ್ಲಡ್ ಸೆಂಟರ್ ಡಾಕ್ಟರ್ ವಿಜಯಕುಮಾರ್ ತೆಲಸಂಗ, ಸಂಜಯ ಹಂಚಿನಾಳ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
Laxmi News 24×7