Breaking News

ಮತ್ತೆ ಮುನ್ನೆಲೆಗೆ ಬಂದ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ: ಮೊಯ್ಲಿ ಕಾರ್ಯಕ್ರಮದಲ್ಲಿ ಜಗಳಬಂದಿ

Spread the love

ಬಾಗಲಕೋಟೆ, ಆಗಸ್ಟ್​ 03: ಬಾಗಲಕೋಟೆಯ (Bagalkote) ಕಲಾಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೊಯ್ಲಿ (Veerappa Moily) ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶಿರಹಟ್ಟಿಯ ಫಕೀರೇಶ್ವರ ಮಹಾಸಂಸ್ಥಾನ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ (Dingaleshwara Swamiji) ಮತ್ತು ಡಾ.ಎಂ.ಎಂ. ಕಲಬುರ್ಗಿ ಪ್ರತಿಷ್ಠಾನದ ಸಂಚಾಲಕ ಪ್ರೊ.ವೀರಣ್ಣ ರಾಜೂರ ಮಧ್ಯೆ ವಾಗ್ವಾದ ನಡೆಯಿತು. ಪ್ರೊ.ವೀರಣ್ಣ ರಾಜೂರ ಅವರು ವೀರಶೈವ-ಲಿಂಗಾಯತ (Veerashaiva-Lingayat) ಪ್ರತ್ಯೇಕ ಧರ್ಮ ಎಂದು ವಾದಿಸಿದರೆ, ವೀರಶೈವ- ಲಿಂಗಾಯತ ಒಂದೇ ಧರ್ಮ ಎಂದು ಸ್ವಾಮೀಜಿ ಪ್ರತಿವಾದಿಸಿದರು.

ಮೊಯ್ಲಿ ಅವರ ವಿಶ್ವಸಂಸ್ಕೃತಿ ಮಹಾಯಾನ ಕಾವ್ಯದಲ್ಲಿ ವೀರಶೈವ ಲಿಂಗಾಯತ ಧರ್ಮ ಅಂತ ಪ್ರಸ್ತಾಪ ಮಾಡಲಾಗಿದೆ. ಒಂದು ಧರ್ಮಕ್ಕೆ ‌ಎರಡು ಹೆಸರಿರುವುದಿಲ್ಲ. ಹೀಗಾಗಿ, ವೀರಶೈವ ಲಿಂಗಾಯತ ಬೇರೆ ಎಂದು ಪ್ರೊ.ವೀರಣ್ಣ ರಾಜೂರ ಮಾತಾಡಿದರು. ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಒಂದು ಧರ್ಮಕ್ಕೆ ಎರಡು ಹೆಸರು ಇರಲ್ಲ ಎಂದು ಪ್ರೊ.ವೀರಣ್ಣ ರಾಜೂರ ಪ್ರತಿವಾದಿಸಿದರು.

ವೀರಣ್ಣ ರಾಜೂರ ಅವರು ಮೊಯ್ಲಿ ಅವರ ಕಾವ್ಯದಲ್ಲಿ ವೀರಶೈವ ಲಿಂಗಾಯತ ಅಂತ ಶಬ್ದ ಪ್ರಯೋಗ ಬಂದಿದೆ ಅಂದರು. ವೀರಣ್ಣ ರಾಜೂರ ಅವರು ಲಿಂಗಾಯತ ಅನ್ನೋದು ನಿರ್ಣಯಿಸಲ್ಪಟ್ಟಿದೆ ಅಂತ ಹೇಳಿದರು. ಆದರೆ ಎಲ್ಲಿ ಯಾವಾಗ ನಿರ್ಣಯ ಆಯ್ತು ನನಗಂತೂ ಗೊತ್ತಿಲ್ಲ. ನನ್ನ ವ್ಯಯಕ್ತಿಕ ವಿಚಾರ ಬಹುದೊಡ್ಡ ವಿಚಾರ ನಡೆದಾಗಲೂ ಹೇಳಿದ್ದೇನೆ. ವೀರಶೈವ-ಲಿಂಗಾಯತ ಅನ್ನೋದು ಬೇರೆಯಲ್ಲ ಅದು ಯಾವಾಗಲೂ ಒಂದೇ. ಅದನ್ನು ಯಾವಾಗಲೂ ಬೇರೆ ಮಾಡಬಾರದು ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ