ಜಿಟಿ ಜಿಟಿ ಮಳೆ ತಂದ ಅವಾಂತರ…ತೊಗರಿ ಬೆಳೆ ನಾಶ…ಕಂಗಾಲಾದ ರೈತ
ಇಳಕಲ್ಲ ತಾಲ್ಲೂಕಿನಲ್ಲಿ ಜಿಟಿ ಜಿಟಿ ಮಳೆತೊಗರಿ ಬೆಳೆ ನಾಶ ; ರೈತರು ಕಂಗಾಲುತೀವ್ರ ತೇವಾಂಶದಿಂದ ತೊಗರಿಗೆ ರೋಗರೈತರಿಗೆ ಆರ್ಥಿಕ ನಷ್ಟ
ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಜಿಟಿ ಜಿಟಿ ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದಾಗಿ ಇಳಕಲ್ಲ ತಾಲ್ಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷವಾಗಿ ತೊಗರಿ ಬೆಳೆದ ರೈತರಿಗೆ ಈ ವಾತಾವರಣ ಕಂಟಕವಾಗಿದೆ.
ಇಳಕಲ್ಲ ತಾಲೂಕಿನ ಬಸನಗೌಡ ಪಾಟೀಲ್ ಎಂಬ ರೈತನು 15 ದಿನಗಳ ಹಿಂದೆ ತೊಗರಿ ಬಿತ್ತನೆ ಮಾಡಿದ್ದ. ಉತ್ತಮ ಮಳೆ ನಿರೀಕ್ಷೆ ಹೊಂದಿದ್ದ ರೈತ ಬಸನಗೌಡ ಈಗ ನಿರಾಸೆಗೊಳಗಾಗಿದ್ದಾನೆ. ನಿರಂತರ ಮಳೆ ಹಾಗೂ ಹೆಚ್ಚು ತೇವಾಂಶದಿಂದಾಗಿ ತೊಗರಿ ಬೆಳೆಯಲ್ಲಿ ರೋಗ ಕಾಣಿಸಿಕೊಂಡಿದ್ದು, ಸಂಪೂರ್ಣ ನಾಶವಾಗಿದೆ.
ಬಸನಗೌಡನ 2 ಎಕರೆ ತೊಗರಿ ಬೆಳೆಗೆ ನೀರು ನಿಂತು ಕೊಳೆತ ಪರಿಣಾಮ ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಪ್ರತಿ ಎಕರೆಗೆ ಸುಮಾರು 30-40 ಸಾವಿರ ರೂ. ವೆಚ್ಚ ಹೂಡಿದ್ದ ರೈತನಿಗೆ ಈಗ ಹೆಚ್ಚಿನ ಆರ್ಥಿಕ ನಷ್ಟ ಉಂಟಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರವೇ ಆಧಾರವೆನ್ನುವಂತೆ, ರೈತ ಬಸನಗೌಡ ಪಾಟೀಲ್ ಬೆಳೆ ನಷ್ಟಕ್ಕೆ ತುರ್ತು ಪರಿಹಾರ ನೀಡುವಂತೆ ಅಧಿಕಾರಿಗಳೊಂದಿಗೆ ಹಾಗೂ ಸರ್ಕಾರದ ಬಳಿ ಆಗ್ರಹಿಸಿದ್ದಾರೆ.
“ಈ ವರ್ಷ ತೊಗರಿ ಬೆಳೆ ಮೇಲೆ ಭರವಸೆ ಇಟ್ಟಿದ್ದೆವು. ಆದರೆ ನಿರಂತರ ಮಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿದೆ. ಸರ್ಕಾರವೇ ನೆರವಾಗಬೇಕು,” ಎಂದು ತಮ್ಮ ಅಳಲನ್ನು ತೋಡ
Laxmi News 24×7