Breaking News

ಶಾಲೆ ಮೇಲೆ ಉರುಳಿ ಬಿದ್ದ ಮರ, ಕೊಠಡಿ ಸಂಪೂರ್ಣ ಹಾನಿ ರಾತ್ರಿ ಮಳೆಯ ಅಬ್ಬರಕ್ಕೆ ಉರುಳಿ ಬಿದ್ದ ಬೃಹತ್ ಮರ

Spread the love

ಶಾಲೆ ಮೇಲೆ ಉರುಳಿ ಬಿದ್ದ ಮರ, ಕೊಠಡಿ ಸಂಪೂರ್ಣ ಹಾನಿ
ರಾತ್ರಿ ಮಳೆಯ ಅಬ್ಬರಕ್ಕೆ ಉರುಳಿ ಬಿದ್ದ ಬೃಹತ್ ಮರ
ಅದೃಷ್ಟವಶಾತ್ ವಿದ್ಯಾರ್ಥಿಗಳು ಹಾಜರಾಗುವ ಮೊದಲು ಸಂಭವಿಸಿದ ಅಪಘಾತ
ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡು
ಕೂಡಲೇ ಕೊಠಡಿಗಳ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹ
ಖಾನಾಪೂರ ತಾಲೂಕಿನ ನಂದಗಡದ ಜೆಸಿಎಸ್ ಆವರಣದಲ್ಲಿರುವ ಉರ್ದು ಶಾಲೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಶಾಲೆಯ ಒಂದು ಕೊಠಡಿಗೆ ಬೃಹತ್ ಆಕಾರದ ಮಾವಿನ ಮರ ಬಿದ್ದು ಬಿದ್ದಿದೆ. ಪರಿಣಾಮವಾಗಿ ಕೊಠಡಿ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಈ ಘಟನೆ ಶಾಲೆಯ ಆರಂಭದ ಮೊದಲು ನಡೆಯಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ.
ಪ್ರತಿದಿನ ವಿದ್ಯಾರ್ಥಿಗಳು ಈ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಇಂದು ಬೆಳಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಗೆ ಹಾಜರಾಗುತ್ತಿದ್ದಂತೆ, ಮಾವಿನ ಮರವು ಕೊಠಡಿಯ ಮೇಲೆ ಬಿದ್ದಿರುವ ಭೀಕರ ದೃಶ್ಯ ಕಂಡುಬಂದಿತು. ತಕ್ಷಣವೇ ಘಟನೆ ಸಂಬಂಧಿಸಿದ ಮಾಹಿತಿ ನಂದಗಡ ವಲಯ ಅರಣ್ಯಾಧಿಕಾರಿ ಕಾರ್ಯಾಲಯಕ್ಕೆ ನೀಡಲಾಯಿತು. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಮರ ತೆರವು ಕಾರ್ಯ ಆರಂಭಿಸಿದ್ದಾರೆ.
ಖಾನಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಹಾನಿಗೊಂಡ ಕೊಠಡಿಯನ್ನು ಶೀಘ್ರ ದುರಸ್ಥಿ ಮಾಡಬೇಕಾಗಿದೆ. ಶಾಲೆಯ ಇತರ ಕೊಠಡಿಗಳ ಸ್ಥಿತಿಯೂ ಹೇಳತೀರದಾಗಿದೆ. ಅವುಗಳು ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಸೂಕ್ತವಲ್ಲ. ಈ ಹಿನ್ನೆಲೆ, ಯೋಗ್ಯ ಹಾಗೂ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಮತ್ತು ಶಿಕ್ಷಕರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ