Breaking News

RSS ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ: ಸಚಿವ ಪ್ರಿಯಾಂಕ ಖರ್ಗೆ

Spread the love

ಕಲಬುರಗಿ: “ಆರ್​ಎಸ್​ಎಸ್​ನಲ್ಲಿನ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ. ಕೊಳಕು ಮನಸ್ಸು, ಕೊಳಕು ಬುದ್ದಿ, ಕೊಳಕು ನಾಲಿಗೆ ಇವರದು” ಎಂದು ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಆರ್​ಎಸ್​ಎಸ್​ ಬ್ಯಾನ್​ ಮಾಡುತ್ತೇನೆ ಎಂದು ಹೇಳಿಲ್ಲ. ಮೂರು ಸಲ ಆರ್​ಎಸ್​ಎಸ್​ ಬ್ಯಾನ್​ ಆಗಿತ್ತು. ಆ ಬ್ಯಾನ್​ ತೆಗೆದು ತಪ್ಪು ಮಾಡಿದೆವು ಎಂದು ಹೇಳಿದ್ದೇನೆ. ನಾವು ಅಧಿಕಾರಕ್ಕೆ ಬಂದರೆ ಬ್ಯಾನ್‌ ಮಾಡೋಣ ತಗೋಳಿ. ಅವರಿಗೆ ಜೈಲಿಗೆ ಹೋಗಲು ಯಾಕೆ ಅಷ್ಟು ಅವಸರ. RSS ಬ್ಯಾನ್ ಮಾಡಲು 10 ಕಾರಣ ಕೊಡಿ ಎಂದು ಬಿಜೆಪಿ ಅವರು ಕೇಳುತ್ತಾರೆ. ಆರ್​ಎಸ್ಎಸ್​ ಅವರು 100 ವರ್ಷದಲ್ಲಿ ದೇಶದ ಸಬಲೀಕರಣಕ್ಕಾಗಿ ಮಾಡಿದ 10 ಒಳ್ಳೆಯ ಕೆಲಸ ಹೇಳಲಿ” ಎಂದು ಟಕ್ಕರ್​ ನೀಡಿದರು.

“ಆರ್​ಎಸ್​ಎಸ್​ ಅವರಿಗೆ 300 – 400 ಕೋಟಿ ಹಣ ಎಲ್ಲಿಂದ ಬರುತ್ತಿದೆ ಎಂಬುದು ನನಗೆ ಗೊತ್ತು. ನಾವು ಯಾವಾಗ 3 ಫಿಗರ್ ಮಾರ್ಕ್ ಬರುತ್ತದೆ, ಆ ದಿನ ಐಟಿ, ಇಡಿ ಅವರನ್ನು ನಾನು ಅಲ್ಲಿಗೆ(RSS) ಬಳಿ ಕಳುಹಿಸುತ್ತೇನೆ. ಆರ್​ಎಸ್​ಎಸ್​ ಚೈಲಾ ಬಿಜೆಪಿಗಳಿದ್ದಾರೆ. ಇದನ್ನು ಹೇಳುವುದಕ್ಕೆ ನಾನು ಹೆದರುವುದಿಲ್ಲ” ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ