Breaking News

ಬೆಳಗಾವಿ ವಾಹನಗಳಿಗೆ ಗೋವಾದಲ್ಲಿ ವಿನಾಕಾರಣ ತೊಂದರೆ ನೀಡದಿರಲು ಗೋವಾ ಸಿಎಂ ಆದೇಶ ಸಿಎಂ ಸಾವಂತ್’ಗೆ ಧನ್ಯವಾದ ಸಲ್ಲಿಸಿದ ಮಾಜಿ ಶಾಸಕ ಅನಿಲ ಬೆನಕೆ

Spread the love

ಬೆಳಗಾವಿ ವಾಹನಗಳಿಗೆ ಗೋವಾದಲ್ಲಿ ವಿನಾಕಾರಣ ತೊಂದರೆ ನೀಡದಿರಲು ಗೋವಾ ಸಿಎಂ ಆದೇಶ

ಸಿಎಂ ಸಾವಂತ್’ಗೆ ಧನ್ಯವಾದ ಸಲ್ಲಿಸಿದ ಮಾಜಿ ಶಾಸಕ ಅನಿಲ ಬೆನಕೆ

ಬೆಳಗಾವಿ ಸೇರಿದಂತೆ ಪರ ರಾಜ್ಯದಿಂದ ಗೋವಾ ರಾಜ್ಯಕ್ಕೆ ಆಗಮಿಸುವ ವಾಹನಗಳಿಗೆ ವಿನಾಕಾರಣ ತೊಂದರೆ ನೀಡಬಾರದೆಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಪೊಲೀಸರಿಗೆ ನಿರ್ದೇಶನ ಜಾರಿ ಮಾಡಿದ್ದು, ತಮ್ಮ ಮನವಿಗೆ ಸ್ಪಂದಿಸಿ ಆದೇಶ ನೀಡಿದ ಹಿನ್ನೆಲೆ ಮಾಜಿ ಶಾಸಕ ಅನಿಲ ಬೆನಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಬೆಳಗಾವಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಗೋವಾ ರಾಜ್ಯಕ್ಕೆ ಆಗಮಿಸುವ ವಾಹನಗಳಿಗೆ ಪಿಐ ದರ್ಜೆಯ ಯಾವುದೇ ಪೊಲೀಸ್ ಅಧಿಕಾರಿಗಳು ಹಗಲಿನಲ್ಲಿ ಚಲನ್ ಕಟ್ಟಿಸಿಕೊಳ್ಳಬಾರದು. ನಿಯಮ ಉಲ್ಲಂಘಿಸುವವರು ಮತ್ತು ಸುಳ್ಳು ಹೇಳುವವರಿಂದ ಎಂ.ವ್ಹಿ ಚಲನ್ ಜಾರಿಗೊಳಿಸಬೇಕೆಂದು ಮುಖ್ಯಮಂತ್ರಿಗಳ ಪ್ರಮೋದ್ ಸಾವಂತ್
ಆದೇಶದಂತೆ ಗೋವಾ ಎಡಿಜಿಪಿಗಳಿಗೆ ನಿರ್ದೇಶನವನ್ನು ಜಾರಿ ಮಾಡಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಜೂನ್ 16 ರಂದು ಗೋವಾ ಸಿಎಂ ಗೆ ಅನಿಲ್ ಬೆನಕೆ ಅವರು ಮನವಿಯನ್ನು ಸಲ್ಲಿಸಿದ್ದರು. ಈ ಹಿನ್ನೆಲೆ ಬಿಜೆಪಿ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಮತ್ತು ಬೆಳಗಾವಿಯ ಮಾಜಿ ಶಾಸಕ ಅನೀಲ್ ಬೆನಕೆ ಅವರು ಗೋವಾ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಉಪಕ್ರಮದಿಂದ ಬೆಳಗಾವಿ ಸೇರಿದಂತೆ ಪರ ರಾಜ್ಯದ ಪ್ರವಾಸಿಗರಿಗೆ ಪ್ರಯೋಜನವಾಗಲಿದ್ದು, ಎರಡು ರಾಜ್ಯದವರಿಗೆ ಅನುಕೂಲವಾಗಲಿದೆ. ಸಾಮಾನ್ಯ ಜನರು ಮತ್ತು ವ್ಯಾಪಾರಿಗಳ ವಂಚನೆಗೆ ಕೊಕ್ಕೆ ಹಾಕಿದಂತಾಗಲಿದೆ. ಅಲ್ಲದೇ ಕರ್ನಾಟಕ ಮತ್ತು ಗೋವಾ ರಾಜ್ಯದ ವ್ಯಾಪಾರ ವಹಿವಾಟು ಹೆಚ್ಚಿಸಲು ಇದು ಸಹಕಾರಿಯಾಗಲಿದೆ ಎಂದು ಅನಿಲ ಬೆನಕೆ ಹೇಳಿದ್ದಾರೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ