Breaking News

ಕಾಲ್ತುಳಿತ ಪ್ರಕರಣ, ಸಿಎಂ ಡಿಸಿಎಂ ಹೊಣೆ ಹೊರಬೇಕೆಂಬ ಬಿಜೆಪಿಗೆ ಡಿಕೆಶಿ ಟಾಂಗ್….

Spread the love

ಕಾಲ್ತುಳಿತ ಪ್ರಕರಣ, ಸಿಎಂ ಡಿಸಿಎಂ ಹೊಣೆ ಹೊರಬೇಕೆಂಬ ಬಿಜೆಪಿಗೆ ಡಿಕೆಶಿ ಟಾಂಗ್….
ಬಿಜೆಪಿಗರನ್ನೇ ಹೊತ್ತು ಮೆರವಣಿಗೆ ಮಾಡೋಣ : ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಸಿಎಂ, ಡಿಸಿಎಂ ಹೊಣೆ ಹೊರಬೇಕೆಂಬ ಬಿಜೆಪಿಯವರ ಆರೋಪಕ್ಕೆ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರನ್ನೇ ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡೋಣ.
ಅವರು ಹೆಣಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ದೇಶದಲ್ಲಿ ರೈಲ್ವೆ ನಿಲ್ದಾಣ, ದೇವಸ್ಥಾನ ಮುಂತಾದೆಡೆ ಸಾಕಷ್ಟು ಇಂತಹ ಘಟನೆಗಳು ನಡೆದಿವೆ ಆದರೆ ನಾವು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಿಲ್ಲ.ಅವರಂತೆ ನಾವು ರಾಜಕೀಯ ಮಾಡೋದಿಕ್ಕೆ ಹೋಗೋದಿಲ್ಲ. ಕಾಲ್ತುಳಿತ ಆಕಸ್ಮಿಕ ಘಟನೆಯಾಗಿದೆ ಅದರ ಬಗ್ಗೆ ನಮಗೂ ನೋವಿದೆ. ಘಟನೆಯಲ್ಲಿ ಯಾರಿಗೆ ಶಿಕ್ಷೆ ಕೊಡಬೇಕು ಏನು ಕ್ರಮ ಕ್ರಮಕೈಗೊಳ್ಳಬೇಕು ಎಲ್ಲವನ್ನು ಸರ್ಕಾರ ಮಾಡುತ್ತಿದೆ. ಅದಕ್ಕಾಗಿ ಆಯೋಗವನ್ನೂ ರಚಿಸಲಾಗಿದೆ. ಏನಿದ್ದರೂ ಅವರಿಗೆ ಹೇಳಲಿ.
ಬಿಜೆಪಿಯವರಿಗೆ ಯಾವ ಸಾಮಾಜಿಕ ಕಾರ್ಯಕರ್ತರೂ ಸಹಕಾರ ನೀಡುತ್ತಿಲ್ಲ ಅಧಿಕಾರವಿಲ್ಲದೆ ಹತಾಶಗೊಂಡು ಹೆಣಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ನನ್ನನ್ನು ಕಂಡರೆ ಭಯ ಹಾಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಡಿಕೆಸಿ ತಿರುಗೇಟು ನೀಡಿದ ಅವರು 2028 ಕ್ಕೆ ವಿಧಾನಸೌಧದ ಮುಂದೆ ಮತ್ತೆ ನಾವೇ ಪ್ರಮಾಣವಚನ ಸ್ವೀಕಾರ ಮಾಡುತ್ತೇವೆಂಬ ಭರವಸೆಯ ಮಾತನ್ನಾಡಿದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ