Breaking News

ಹುಬ್ಬಳ್ಳಿಯಲ್ಲಿ 1,700 ರೌಡಿ ಶೀಟರ್​ಗಳ ಪರೇಡ್​

Spread the love

ಹುಬ್ಬಳ್ಳಿ : ಸಾರ್ವಜನಿಕ ಶಾಂತಿ, ನೆಮ್ಮದಿ ಭಂಗ ಆಗದಂತೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲಾಗುತ್ತೆ. ವೈಲೆಂಟ್ ಆರೋಪಿಗಳ ಮೇಲೆ ರೌಡಿ ಶೀಟರ್ ಹಾಕಲಾಗುವುದು. ಗಡಿಪಾರು, ಗುಂಡಾ ಆಕ್ಟ್ ಮಾಡುವ ಕೆಲಸ ಮಾಡ್ತಾ ಬಂದಿದ್ದೇವೆ. ರಾಜ್ಯದಲ್ಲಿ ರೌಡಿ ಶೀಟರ್​ಗಳು ಸಾರ್ವಜನಿಕರ ಮೇಲೆ ಹಲ್ಲೆ, ಕೊಲೆ ಮಾಡಿರುವ ಹಿನ್ನೆಲೆ ನಮ್ಮ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿ ಪರೇಡ್ ಮಾಡಲಾಗುತ್ತಿದೆ ಎಂದು ಹು -ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ‌ತಿಳಿಸಿದ್ದಾರೆ.

ನಗರದಲ್ಲಿ ಇಂದು ರೌಡಿಪರೇಡ್ ನಡೆಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದಿನ ಪರೇಡ್​​ನಲ್ಲಿ ಒಟ್ಟು 1,700 ರೌಡಿ ಶೀಟರ್​ಗಳನ್ನ ಕರೆತರಲಾಗಿದೆ. ಪ್ರತಿ ಠಾಣೆಯಿಂದ 50 – 60 ರಿಂದ 200ರ ವರೆಗೆ ರೌಡಿ ಶೀಟರ್ ಇದ್ದಾರೆ. 50 ಜನರನ್ನ ಗಡಿಪಾರು ಮಾಡಲಾಗಿದ್ದು, ಆರೋಪಿಗಳ ಮೇಲೆ ರೌಡಿ ಶೀಟ್ ಇತ್ತು. ಬೀದರ್, ಕಲ್ಬುರ್ಗಿ, ಚಾಮರಾಜನಗರ ಸೇರಿ ಹಲವೆಡೆ ಗಡಿಪಾರು ಮಾಡಿದ್ದೇವೆ. ಗಡಿಪಾರು ಮಾಡಿದ ವ್ಯಾಪ್ತಿಯಲ್ಲಿ ಇದ್ದಾನಾ? ಅಂತ ಸಹ ನಾವು ಪರಿಶೀಲನೆ ಮಾಡಿದ್ದೇವೆ ಎಂದರು.ಮಾರಕಾಸ್ತ್ರ ಇಟ್ಟುಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿ ಆದವರು, ಹಲವು ಕೃತ್ಯ ಮಾಡಿದವರ ಮೇಲೆ ಕ್ರಮ ಕೈಗೊಂಡಿದ್ದೇವೆ. ಇದರ ಆಧಾರದ ಮೇಲೆ ಪರೇಡ್ ಮಾಡ್ತಾ ಇದ್ದೇವೆ. ಇವತ್ತು 980 ಜನ ರೌಡಿಗಳು ಬಂದಿದ್ದಾರೆ. ಉಳಿದವರು ಅನಾರೋಗ್ಯ ಸೇರಿ ಹಲವು ಕಾರಣಗಳಿಂದ ಬಂದಿಲ್ಲ. ಕೆಲವರು ರೌಡಿ ಶೀಟರ್ ಪರೇಡ್ ಮಾಡ್ತಾ ಇರೋ ವಿಷಯ ಕೇಳಿ ಪರಾರಿ ಆಗಿದ್ದಾರೆ. ನಿನ್ನೆ ರಾತ್ರಿ 12 ಗಂಟೆಯಿಂದಲೇ ಎಲ್ಲಾ ಪ್ರೊಸೆಸ್ ಮಾಡ್ತಾ ಇದ್ದೆವು. ಆರೋಪಿಗಳ ಮೊಬೈಲ್​​ಗಳನ್ನು ಸಹ ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ