‘ನಮಸ್ಕಾರ.. ನಾನು ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ಈ ರಾಜ್ಯ ಮತ್ತು ಜನರ ಮೇಲೆ ಅಪರೂಪದ ಪ್ರೀತಿ ಹರಿಸಿರುವೆ. ಅದು ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲ, ನಾನು ಜಗತ್ತಿನ ಎಲ್ಲಿ ಇದ್ದರೂ ಸಹ. ನಿಜ ಹೇಳಬೇಕೆಂದರೆ, ನಾನು ನನ್ನ ಕನ್ನಡ ಹಾಡುಗಳನ್ನು ಹಿಂದಿ ಸೇರಿ ಇತರ ಭಾಷೆಗಳ ಹಾಡೆಗಳಿಗಿಂತಲೂ ಹೆಚ್ಚು ಗೌರವದಿಂದ ನೋಡಿದ್ದೇನೆ. ಈ ಮಾತಿಗೆ ಸಾಕ್ಷಿಯಾಗಿ ನೂರಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ನಾನು ಪ್ರತಿಯೊಂದು ಕರ್ನಾಟಕದ ಕಾರ್ಯಕ್ರಮಕ್ಕಾಗಿಯೂ ಒಂದು ಗಂಟೆಗಿಂತ ಹೆಚ್ಚು ಕನ್ನಡ ಹಾಡುಗಳನ್ನು ತಯಾರಿಸಿಕೊಂಡಿರುತ್ತೇನೆ’ಆದರೆ, ನಾನು ಇನ್ನೂ ಬಾಲಕನಲ್ಲ. ಯಾರಿಂದಲಾದರೂ ಅವಮಾನವನ್ನು ಸಹಿಸುವ ವಯಸ್ಸಿಲ್ಲ. ನನಗೆ ಈಗ 51 ವರ್ಷ, ಜೀವನದ ದ್ವಿತೀಯಾರ್ಧಕ್ಕೆ ಹೆಜ್ಜೆ ಇಟ್ಟಿದ್ದೇನೆ.
ನನ್ನ ಮಗನಷ್ಟು ಕಿರಿಯವನು ನನ್ನನ್ನು ಸಾವಿರಾರು ಜನರ ಮುಂದೆ ಭಾಷೆಯ ಹೆಸರಿನಲ್ಲಿ ಬೆದರಿಸಲು ಪ್ರಯತ್ನಿಸಿದಾಗ, ಅದು ನನ್ನ ಕೆಲಸದ ವಿಚಾರದಲ್ಲಿ ಎರಡನೇ ಭಾಷೆಯಾದ ಕನ್ನಡವೇ ಆಗಿರಲಿ ನಾನು ಪ್ರತಿಕ್ರಿಯಿಸುದು ಸಹಜ. ಅದು ಕೂಡ ನಾನು ಮೊದಲ ಹಾಡು ಹಾಡಿದ ತಕ್ಷಣವೇ. ಅವನು ಇನ್ನೂ ಕೆಲವರನ್ನು ಪ್ರಚೋದಿಸಿದ. ಅವರದೇ ಜನರು ಕೂಡಾ ಅವಮಾನವಾಗದಂತೆ ನಿಲ್ಲಿಸಬೇಕೆಂದು ಕೇಳುತ್ತಿದ್ದರು.’‘

ನಾನು ಅವರಿಗೆ ತುಂಬಾ ಶಾಂತಿಯುತವಾಗಿ, ಪ್ರೀತಿಯಿಂದ ಹೇಳಿದೆ. ಈಗ ಮಾತ್ರ ಕಾರ್ಯಕ್ರಮ ಪ್ರಾರಂಭವಾಗಿದೆ. ಇದು ನನ್ನ ಮೊದಲ ಹಾಡು. ನಾನು ನಿಮಗೆ ನಿರಾಸೆ ಉಂಟು ಮಾಡಲ್ಲ. ಆದರೆ ನೀವು ನನಗೆ ಕಾರ್ಯಕ್ರಮವನ್ನು ನನ್ನ ಯೋಜನೆಯಂತೆ ಮುಂದುವರಿಸಲು ಅವಕಾಶ ನೀಡಬೇಕೆಂದೆ. ಪ್ರತಿಯೊಬ್ಬ ಕಲಾವಿದನು ಹಾಡುಗಳ ಪಟ್ಟಿ ರೂಪಿಸಿಕೊಂಡಿರುವುದರಿಂದ ಸಂಗೀತಗಾರರು ಹಾಗೂ ತಾಂತ್ರಿಕರು ಎಲ್ಲರೂ ಸಮನ್ವಯದಲ್ಲಿರುತ್ತಾರೆ. ಆದರೆ ಅವರು ಗದ್ದಲ ಸೃಷ್ಟಿಸಲು, ಬೆದರಿಕೆ ಹಾಕಲು ಕಾತರವಾಗಿದ್ದರು.’
Laxmi News 24×7