Breaking News

ಸಚಿವ ಶರಣಪ್ರಕಾಶ್​​ ಪಾಟೀಲ್, ಕಾಂಗ್ರೆಸ್​​​​ ಮುಖಂಡನ ನಡುವೆ ಮಾತಿನ ಚಕಮಕಿ

Spread the love

ರಾಯಚೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್​​ ಪಾಟೀಲ್​​ ಹಾಗೂ ಕಾಂಗ್ರೆಸ್​​​​ ಮುಖಂಡನ ನಡುವೆ ಲಿಂಗಸುಗೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತೀವ್ರ ವಾಗ್ವಾದ ನಡೆದಿದೆ.

ಮಾನವಿ ತಾಲೂಕಿನ ಉಟಕನೂರು ಗ್ರಾಮದಲ್ಲಿನ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುವ ಮಾರ್ಗಮಧ್ಯೆ ಲಿಂಗಸುಗೂರು ಪಟ್ಟಣದ ಪ್ರವಾಸ ಮಂದಿರದಲ್ಲಿ ಕೆಲ ಮುಖಂಡರೊಂದಿಗೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್​ ತಂಗಿದ್ದರು. ಈ ವೇಳೆ ಕಾಂಗ್ರೆಸ್​ ಮುಖಂಡ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ನಾಮನಿರ್ದೇಶನ ಸದಸ್ಯ ಗದ್ದೆನಗೌಡ ಪಾಟೀಲ್​​ ನಡುವೆ ಮಾತಿನ ಚಕಮಕಿ ನಡೆದಿದೆ.

“ನಮ್ಮ ರಾಯಚೂರು ಜಿಲ್ಲಾ ಸಚಿವರಾಗಿದ್ದೀರಿ, ನಮ್ಮ ವಿಧಾನಸಭಾ ಕ್ಷೇತ್ರವಿದು. ಇಲ್ಲಿ ಪಕ್ಷದ ಕಾರ್ಯಾಲಯವಿದೆ. ಕಾರ್ಯಕರ್ತರು ಇದ್ದಾರೆ, ಮುಖಂಡರು ಇದ್ದಾರೆ. ಆದರೆ ನೀವು ಯಾವುದೇ ಮಾಹಿತಿ ನೀಡದೆ ಬರುತ್ತೀರಲ್ಲಾ? ಎಂದು ಗದ್ದೆನಗೌಡ ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

ಆಗ ಗರಂ ಆದ ಸಚಿವರು, ” ನಾನು ಲಿಂಗಸುಗೂರು ಬಂದಿಲ್ಲ. ಬೇರೆ ಕಡೆ ಹೋಗುತ್ತಿರುವೆ, ನಿನ್ಯಾರ ನನ್ನ ಕೇಳೋಕೆ?. ನಾನ್​ಸೆನ್ಸ್​ ಥರ ಮಾತನಾಡಬೇಡ” ಎಂದು ಗದರಿದ್ದಾರೆ.

ಆ ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಇದ್ದ ಮುಖಂಡರು ಸಮಾಧಾನ ಪಡಿಸಲು ಮುಂದಾದರೂ ಹಾಗೇ ವಾಗ್ವಾದ ನಡೆಯಿತು. ಇದರಿಂದ ಕೆರಳಿದ ಸಚಿವರು ಅಲ್ಲಿಂದ ತೆರಳಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ