Breaking News

ಶಾಸಕ ಬಸನಗೌಡ ಪಾಟೀಲ, ಯತ್ನಾಳ ವಿರುದ್ಧ ಒಮ್ಮೆ ಸ್ಪರ್ಧಿಸುವ ಇರಾದೆ ಇದೆ:ಸಚಿವ ಶಿವಾನಂದ ಪಾಟೀಲ

Spread the love

ಶಾಸಕ ಬಸನಗೌಡ ಪಾಟೀಲ, ಯತ್ನಾಳ ವಿರುದ್ಧ ಒಮ್ಮೆ ಸ್ಪರ್ಧಿಸುವ ಇರಾದೆ ಇದೆ:ಸಚಿವ ಶಿವಾನಂದ ಪಾಟೀಲ
ವಿಜಯಪುರ : ಕೆಲ ದಿನಗಳ ಹಿಂದೆ ಅಣ್ಣ ಬಸವಣ್ಣನವರ ಕುರಿತು ಅಪಮಾನಕರ ರೀತಿ ಮಾತನಾಡಿದ್ದ ಹುಚ್ಚು ಮನಸ್ಥಿತಿಯ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇದೀಗ ಇಸ್ಲಾಂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಪ್ರವಾದಿ ಮಹಮ್ಮದ್ ಪೈಗಂಭರ ಕುರಿತು ಅವಮಾನಕರ ಮಾತನಾಡಿದ್ದಾರೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶ್ರೀ ಶಿವಾನಂದ ಪಾಟೀಲ ಅವರು ವಾಗ್ದಾಳಿ ನಡೆಸಿದರು.
ಸೋಮವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಜಂಟಿ ಆಕ್ಷನ್‌ ಕಮಿಟಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಸಚಿವರು, ನಗರದ ಜನತೆ ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳದೆ ಸಮಾಜದಲ್ಲಿ ಜಾತಿ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೆಲಸ ನಡೆಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಜಿಲ್ಲೆಯ ಜನತೆ ಸಚಿವ ಯತ್ನಾಳ ಅವರನ್ನು ಶಾಸಕ, ಸಂಸದ, ಕೇಂದ್ರ ಸಚಿವರನ್ನಾಗಿ ಮಾಡಿದೆ. ದೇವರು ಎಲ್ಲವನ್ನೂ ಕೊಟ್ಟರೂ ಇವರು ಹಾಳು ಮಾಡಿಕೊಂಡಿದ್ದಾರೆ. ಇಂಥ ವರ್ತನೆಯ ಕಾರಣಕ್ಕೆ ಅವರ ಪಕ್ಷದಿಂದಲೂ ಹೊರ ಹಾಕಿಸಿಕೊಂಡರೂ ಬುದ್ದ ಬಂದಿಲ್ಲ. ಸಮಾಜ ಒಡೆಯುವ ಮನಸ್ಥಿತಿಯ ಹೇಳಿಕೆ ನೀಡುತ್ತಿರುವ ಯತ್ನಾಳಗೆ ಈ ಬೃಹತ್ ಹೋರಾಟದ ಮ‌ೂಲಕ ಈ ವೇದಿಕೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಇನ್ನಾದರೂ ಮನುಷ್ಯತ್ವ ಇರಿಸಿಕೊಂಡು ಬದಲಾವಣೆಗೆ ದೇವರು ಬುದ್ದಿ ಕೊಡಲಿ ಎಂದರು.
ಆಕಾಶಕ್ಕೆ ಉಗಿದರೆ ಆತನ ಮುಖಕ್ಕೇ ಬೀಳುತ್ತದೆ ಎಂಬ ಪರಿಜ್ಞಾನ ಇಲ್ಲದ ವ್ಯಕ್ತಿ ಎಂದು ಶಾಸಕ ಯತ್ನಾಳ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಚಿವರು,ಒಮ್ಮೆ ಆತನ ವಿರುದ್ದ ಸ್ಪರ್ಧೆ ಮಾಡಿ ಬುದ್ಧಿ ಕಲಿಸುವ ಇಚ್ಛೆ ಇದೆ ಎಂದರು.
ಯತ್ನಾಳ ವರ್ತನೆ ಸಹಿಸದೇ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಇಡೀ ರಾಜ್ಯದ ಜನರು ಯತ್ನಾಳಗೆ ಪಾಠ ಕಲಿಸಬೇಕಿದೆ. ಯಾವುದೇ ಪಕ್ಷದ ವ್ಯಕ್ತಿ ಇದ್ದತೂ ಯತ್ನಾಳ ರೀತಿ ಮಾತನಾಡಬಾರದು.
ಈ ಹೋರಾಟದ ಬಳಿಕವಾದರೂ ಸುಧಾರಣೆ ಆದರೆ ಅವರಿಗೆ ಒಳಿತು ಎಂದು ಯತ್ನಾಳಗೆ ಎಚ್ಚರಕೆ ಕೊಟ್ಟ ಸಚಿವ ಶಿವಾನಂದ ಪಾಟೀಲ್ ಯಾವುದೇ ಸಮಾಜದ ಕುರಿತು ಯಾರೂ ಮಾತನಾಡಬಾರದು ಎಂದು ಕಿವಿಮಾತು ಹೇಳಿದರು.
ಭಾರತ ನಮ್ಮ‌ ಮನೆ ನಮ್ಮನ್ನು ಕೆಡಿಸೋಕೆ ಜಾತಿ ವಿಷ ಬೀಜ ಬಿತ್ತುತ್ತಾರೆ, ಇಂಥ ವ್ಯಕ್ತಿಗಳ ಕುರಿತು ಎಚ್ಚತವಾಗಿರಬೇಕು. ಪೆಹೆಲ್ಗಾಮ್‌ ಘಟನೆಯನ್ನು ಖಂಡಿಸಿದ ಸಚಿವರು, ಜನರೆಲ್ಲರೂ ದೇಶದ ಪರವಾಗಿದ್ದಾರೆ. ಉಗ್ರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ನಮ್ಮೆಲ್ಲರ ಬೆಂಬಲ ಇದೆ ಎಂದರು.
ಮುಸ್ಲಿಂ ಧರ್ಮಗುರು ತನ್ವೀರ ಪೀರಾ, ಮನಗೂಳಿ ವಿರಕ್ತ ಮಠದ ವಿರತೀಶಾನಂದ ಶ್ರೀಗಳು, ಜೈನಾಪುರದ ಸಿದ್ಧಲಿಂಗ ಶ್ರೀಗಳು, ಶಾಸಕರಾದ ಯಶವಂತರಾಯಗೌಡ ಪಾಟೀಲ, ವಿಠ್ಠಲ ಕಟಕಧೊಂಡ, ಅಶೋಕ ಮನಗೂಳಿ, ವಿಜಯಾನಂದ ಕಾಶಪ್ಪನವರ, ಸುನಿಲಗೌಡ ಪಾಟೀಲ, ಮಾಜಿ ಶಾಸಕ ರಾಜು ಆಲಗೂರ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ