ಗುಂಡೇನಟ್ಟಿ ಗ್ರಾಮದಲ್ಲಿ ಹಾಸ್ಯ ಪ್ರಧಾನ ಕನ್ನಡ ಸಾಮಾಜಿಕ ನಾಟಕವನ್ನು ಉದ್ಘಾಟಿಸಿದ ಶಾಸಕ ವಿಠ್ಠಲ ಹಲಗೇಕರ
ಖಾನಾಪೂರ ತಾಲೂಕಿನ ಗುಂಡೇನಟ್ಟಿ ಗ್ರಾಮದಲ್ಲಿ ಸಸ್ಸಿಗೆ ನೀರು ಹಾಕಿ, ರಿಬ್ಬನ್ ಕಟ್ ಮಾಡುವ ಮೂಲಕ ಇನ್ನಿತರ ಮುಖಂಡರೊಂದಿಗೆ ಸಾಮಾಜಿಕ ನಾಟಕ ಉದ್ಘಾಟನೆ ನೆರವೇರಿಸಿದ ಮಹಾಲಕ್ಷ್ಮೀ ಗ್ರುಪ್ ಸಂಸ್ಥಾಪಕ ಅಧ್ಯಕ್ಷ ಶಾಸಕ ವಿಠ್ಠಲ ಹಲಗೇಕರ
ತದನಂತರದಲ್ಲಿ ಮಾತನಾಡಿದ ಅವರು ಶ್ರೀ ಸತ್ಯಮ ದೇವಿ ಹಾಗೂ ಶ್ರೀ ಕರೇಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಗುರು ಸಿದ್ದಲಿಂಗೇಶ್ವರ ನಾಟಕ ಸಂಘದ ವತಿಯಿಂದ “ನೀ ಹೂ ಅಂದರ ನಿಚ್ಚ ಆಕ್ಕೇನಿ ಇಲ್ಲಂದ್ರ ಹುಚ್ಚಿ ಆಕ್ಕೇನಿ” ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದ್ದು ಇದಕ್ಕೆ ಬಿಳಕಿ ಅವರೋಳ್ಳಿ ರುದ್ರ ಸ್ವಾಮಿ ಮಠದ ಶ್ರೀ ಚೆನ್ನಬಸವ ದೇವರು ಸಾನಿಧ್ಯ ವಹಿಸಲಿದ್ದು ಎಲ್ಲರೂ ಸೇರಿ ಈ ನಾಟಕ ಯಶಸ್ವಿಯಾಗಿಸಿರಿ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ,ನಂದಗಡ ಪೋಲಿಸ್ ಠಾಣೆಯ ಪಿಎಸ್ಐ ಬಾದಾಮಿ,ದಶರಥ ಬನೋಶಿ ಬೀಡಿ ತಾಲೂಕಾ ರಚನಾ ಸಮಿತಿಯ ಅಧ್ಯಕ್ಷ ವಿಠ್ಠಲ ಹಿಂಡಲಕರ ಸೇರಿದಂತೆ ಇನ್ನಿತರ ಪ್ರಮುಖ ಮುಖಂಡರು ಗುಂಡೇನಟ್ಟಿ ಗ್ರಾಮದಲ್ಲಿ ಯುವಕರು ಹಿರಿಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
Laxmi News 24×7