Breaking News

ನಾವು ಬಿಜೆಪಿ ಬಿಡಲ್ಲ, ಯತ್ನಾಳ್​ ಹೊಸ ಪಕ್ಷ ಕಟ್ಟಲ್ಲ: ರಮೇಶ್​ ಜಾರಕಿಹೊಳಿ

Spread the love

ಬೆಳಗಾವಿ: “ನಾವು ಯಾವುದೇ ಪರಿಸ್ಥಿತಿಯಲ್ಲಿ ಬಿಜೆಪಿ ಪಕ್ಷ ಬಿಡುವುದಿಲ್ಲ‌‌. ಅದೇ ರೀತಿ ಬಸನಗೌಡ ಪಾಟೀಲ ಯತ್ನಾಳ್​ ಹೊಸ ಪಕ್ಷ ಕಟ್ಟಲ್ಲ, ಬಿಜೆಪಿಯಲ್ಲೇ ಮುಂದುವರೆಯುತ್ತಾರೆ. ನೂರಕ್ಕೆ ನೂರರಷ್ಟು ಯತ್ನಾಳ್​ ಬಿಜೆಪಿಗೆ ವಾಪಸ್ ಬರುತ್ತಾರೆ” ಎಂದು ಶಾಸಕ ರಮೇಶ್​ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಯತ್ನಾಳ್​ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ. ಮಾಧ್ಯಮದಲ್ಲಿ ಬಂದಿರುವುದೇ ಬೇರೆ. ಹಾಗಾಗಿ, ಬಿಜೆಪಿಯಲ್ಲಿ ಯತ್ನಾಳ್​ ಮುಂದುವರೆಯವ ವಿಶ್ವಾಸವಿದೆ. ಅವರು ಎಲ್ಲಿಯೂ ಹೋಗಲ್ಲ” ಎಂದರು.

ಯತ್ನಾಳ್​ ಉಚ್ಛಾಟನೆಯಾಗಿದ್ದು ದುರ್ದೈವ: ಹಿಂದುತ್ವಕ್ಕಾಗಿ ಹೊಸ ಪಕ್ಷ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿ, “ಆರ್​ಎಸ್ಎಸ್ ಇದೆಯಲ್ಲ ಅಷ್ಟೇ ಸಾಕು. ಬೇರೆ ಯಾವುದರ ಅವಶ್ಯಕತೆ ಇಲ್ಲ. ಮೊನ್ನೆ ಶಾಸಕರ ಸಭೆಯಲ್ಲಿ ಚರ್ಚೆ ಆಗಿದೆ. ಪಕ್ಷಕ್ಕೆ ಮುಜಗುರ ಆಗುವ ಹೇಳಿಕೆ ಕೊಡಬೇಡ ಅಂತಾ ಹೇಳಿದ್ದೇವೆ. ಯತ್ನಾಳ್​ ನಮ್ಮ ಪಕ್ಷದ ದೊಡ್ಡ ನಾಯಕರಿದ್ದರು. ಉಚ್ಛಾಟನೆ ಆಗಿದ್ದು ದುರ್ದೈವ. ಪಕ್ಷದ ಹಿರಿಯರನ್ನು ಶೀಘ್ರವೇ ಭೇಟಿ ಮಾಡಿ ಯತ್ನಾಳ್​ ಅವರ ಉಚ್ಚಾಟನೆ ವಾಪಸ್​ ಪಡೆದುಕೊಳ್ಳುವಂತೆ ಮನವಿ ಮಾಡುತ್ತೇವೆ” ಎಂದು ತಿಳಿಸಿದರು.ಅವರನ್ನೇ ಕೇಳಿ: ವಿಜಯೇಂದ್ರ ಹಾಗೂ ಯತ್ನಾಳ್ ಮಾತಿನ ಸಮರ ಮತ್ತೆ ಮುಂದುವರೆದಿದೆ ಎಂಬ ಪ್ರಶ್ನೆಗೆ, “ಯತ್ನಾಳ್​ ಅವರನ್ನೇ ಕೇಳಬೇಕು ಈ ವಿಷಯ” ಎಂದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ