Breaking News

ಬೇಸಿಗೆ ಆರಂಭಕ್ಕೂ ಮುನ್ನವೇ ಜೀವ ಜಲಕ್ಕಾಗಿ ಹಾಹಾಕಾರ ಮಹಾಲಿಂಗಪುರದಲ್ಲಿ ಜಲಕ್ಷಾಮ!!!???

Spread the love

ಬೇಸಿಗೆ ಆರಂಭಕ್ಕೂ ಮುನ್ನವೇ ಜೀವ ಜಲಕ್ಕಾಗಿ ಹಾಹಾಕಾರ
ಮಹಾಲಿಂಗಪುರದಲ್ಲಿ ಜಲಕ್ಷಾಮ!!!???
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ಬೀರು ಬಿಸಿಲಿನಲ್ಲಿ ಜೀವ ಜಲಕ್ಕಾಗಿ ಹಾಹಾಕಾರ ಉಂಟಾಗಿದೆ. ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ಬೇಸಿಗೆ ಆರಂಭಕ್ಕೂ ಮುನ್ನವೇ ಜೀವ ಜಲಕ್ಕಾಗಿ ಹಾಹಾಕಾರ ಉಂಟಾಗಿದ್ದು, ದಾಹ ನೀಗಿಸಲು ನೀರಿಗಾಗಿ ಜನರು ತೋಟದಲ್ಲಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಆರಂಭದಲ್ಲೇ ಈ ಸ್ಥಿತಿಯಾದ್ರೆ, ಬೀರು ಬೇಸಿಗೆಯಲ್ಲಿ ಇನ್ನೆಂತಹ ಪರಿಸ್ಥಿತಿ ಆ ಭಗವಂತನೇ ಬಲ್ಲ ಎನ್ನುತ್ತಿದ್ದಾರೆ
ಇಲ್ಲಿನ ಜನ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ವಾರ್ಡ್ ನಂ. 14 ರಲ್ಲಿ ಕುಡಿಯುವ ನೀರಿಲ್ಲದೇ ಜನರು ತತ್ತರಿಸುತ್ತಿದ್ದಾರೆ. ಒಂದು ತಿಂಗಳಿನಿಂದ ನಿತ್ಯ ನೀರಿಗಾಗಿ ಪರದಾಡುತ್ತಿದ್ದಾರೆ. ಕೆಂಗೇರಿ ಮಡ್ಡಿಯಲ್ಲಿರುವ ಜನರು ನೀರಿಗಾಗಿ ಪಡುತ್ತಿರುವ ಹರಸಾಹಸ ಅಷ್ಟಿಷ್ಟಲ್ಲ. ಬೇರೆಯವರ ತೋಟಗಳಿಗೆ ಹೋಗಿ ಕುಡಿಯುವ ನೀರು ತರಲಾಗುತ್ತಿದೆ.
ಪುರಸಭೆ ಗಮನಕ್ಕೆ ತಂದಿದ್ರು ಜನತೆಗೆ ಸ್ಪಂದನೆ ದೊರೆಯುತ್ತಿಲ್ಲ. ಸುಮಾರು 100 ಕ್ಕೂ ಹೆಚ್ಚು ಕುಟುಂಬಗಳಿಗೆ ಕುಡಿಯುವ ನೀರಿನ ಬವಣೆ ಎದುರಾಗಿದೆ. ಕನಿಷ್ಠ ಮೂಲಭೂತ ಸೌಕರ್ಯ ಒದಗಿಸದ ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ. ನೀರಿಗಾಗಿ ಬೀರು ಬಿಸಿಲಲ್ಲಿ ಮಗುವನ್ನು ಎತ್ತಿಕೊಂಡು ಮಹಿಳೆಯರು ನೀರು ತರುತ್ತಿದ್ದಾರೆ. ಕುಡಿಯುವ ನೀರಿಗಾಗಿ ಕೋಟಿ ಕೋಟಿ ವ್ಯಯಿಸುವ ಸರ್ಕಾರದ ಯೋಜನೆಗಳೆಲ್ಲಿ ? ಯಾರಿಗೆ ? ಎಂಬ ಪ್ರಶ್ನೆ ಇಲ್ಲಿ ನಿರ್ಮಾಣವಾಗಿದೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ