ಚಿಕ್ಕಮಗಳೂರು, ಮಾರ್ಚ್ 19: ನಾಪತ್ತೆಯಾಗಿದ್ದ (Missing) 10ನೇ ತರಗತಿ ವಿದ್ಯಾರ್ಥಿ (student) ನದಿಯಲ್ಲಿ ಶವವಾಗಿ ಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ ಬಳಿ ಭದ್ರಾ ನದಿಯಲ್ಲಿ ನಡೆದಿದೆ. ಮೂಲತಃ ಹಾಸನ ಜಿಲ್ಲೆಯ ಬೇಲೂರು ನಿವಾಸಿಯಾಗಿರುವ ಶ್ರೇಯಸ್, ಕಳಸ ಪಟ್ಟಣದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಾರ್ಚ್ 16ರಂದು ನಾಪತ್ತೆಯಾಗಿದ್ದ. ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಕಳಸ ಪಟ್ಟಣದ ಚಿಕ್ಕಪ್ಪನ ನಿವಾಸದಲ್ಲಿ ಶ್ರೇಯಸ್ ವಾಸವಿದ್ದ. ನಾಪತ್ತೆಯಾಗಿದ್ದ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಇಂದು ಭದ್ರಾ ನದಿಯಲ್ಲಿ ಶವ ತೆಲುವುದನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಭದ್ರಾ ನದಿಯಿಂದ ಶ್ರೇಯಸ್ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಶ್ರೇಯಸ್ ಸಾವಿನ ಸುತ್ತ ನೂರೆಂಟು ಅನುಮಾನಗಳು ಹುಟ್ಟಿಕೊಂಡಿವೆ.
ಕಾನೂನು ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಶರಣು
ಕಾನೂನು ವಿದ್ಯಾರ್ಥಿ ಓರ್ವ ಎಸ್ಸಿ, ಎಸ್ಟಿ ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವಂತಹ ಘಟನೆ ಚಿತ್ರದುರ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆಕಾಶ್(21) ಮೃತ ವಿದ್ಯಾರ್ಥಿ. ಮೃತ ಆಕಾಶ್ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತೇರದಾಳ ಗ್ರಾಮದ ನಿವಾಸಿ. ಚಿತ್ರದುರ್ಗದ ಕೋಟೆ ಠಾಣೆಗೆ ಆಕಾಶ್ ತಂದೆ ಶರಣಪ್ಪ ದೂರು ನೀಡಿದ್ದಾರೆ.
Laxmi News 24×7