Breaking News

ಶಾಸಕರ ನಿಧಿಗೂ ಕಾಸಿಲ್ಲದ ದುಸ್ಥಿತಿ ಕರ್ನಾಟಕ ಸರ್ಕಾರದ್ದು ಆಗಿದೆ, ಸರ್ಕಾರಿ ಖಜಾನೆಯಲ್ಲಿ ದುಡ್ಡೇ ಇಲ್ಲ ..!!

Spread the love

ಬೆಂಗಳೂರು: ಶಾಸಕರ ನಿಧಿಗೂ ಕಾಸಿಲ್ಲದ ದುಸ್ಥಿತಿ ಕರ್ನಾಟಕ ಸರ್ಕಾರದ್ದು ಆಗಿದೆ, ಸರ್ಕಾರಿ ಖಜಾನೆಯಲ್ಲಿ ದುಡ್ಡೇ ಇಲ್ಲ ಎಂದು ಈ ಮೊದಲು ಗುಡುಗಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ಮತ್ತೆ ಮುಖ್ಯಮಟ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ದೆಹಲಿ ಸರ್ಕಸ್ ಬೇಗ ಮುಗಿಸಿ ರಾಜ್ಯದಲ್ಲಿ ಸಂಬಳ ಇಲ್ಲದೆ ಪರದಾಡುತ್ತಿರುವ ಶಿಕ್ಷಕರ ಕಡೆ ಗಮನಕೊಡಿ ಎಂದು ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಣಗಳಲ್ಲಿ ಪತ್ರಿಕೆಯ ಪಟವೊಂದು ಪೊಸ್ಟ್ ಮಾಡಿ “ಸನ್ಮಾನ್ಯ ಯಡಿಯೂರಪ್ಪ ಅವರೇ, ನಿಮ್ಮ‌ ಸಚಿವ ಸಂಪುಟ ರಚನೆಯ ದೆಹಲಿ ಸರ್ಕಸ್ ಬೇಗ ಮುಗಿಸಿ ರಾಜ್ಯದಲ್ಲಿ ಸಂಬಳ ಇಲ್ಲದೆ ಪರದಾಡುತ್ತಿರುವ ಶಿಕ್ಷಕರ ಕಡೆ ಗಮನಕೊಡಿ. ಸರ್ಕಾರಿ ಖಜಾನೆಯೇ ಖಾಲಿಯಾದರೆ ಎಲ್ಲಿಯ ಸರ್ಕಾರ? ಎಲ್ಲಿಯ ಸಚಿವ ಸಂಪುಟ? ಎಂದು ಬರೆದುಕೊಂಡಿದ್ದಾರೆ.

ಕಳೆದ ಎರಡು ತಿಂಗಳುಗಳಿಂದ ಅನುದಾನ ಇಲ್ಲದೆ ಸರ್ಕಾರಿ ಶಾಲೆಯ ಶಿಕ್ಷಕರು ಪರದಾಡುವ ಸ್ಥಿತಿಗೆ ಬಂದಿದ್ದಾರೆ ಮತ್ತು 850 ಕೋಟಿ ಹೆಚ್ಚಿನ ಅನುದಾನಕ್ಕಾಗಿ ಶಿಕ್ಷಣ ಇಲಾಖೆ ಸರ್ಕಾರದ ಮೊರೆ ಹೊಗಲಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ